ಅಗತ್ಯ ಪೌಷ್ಟಿಕ ಆಹಾರಗಳನ್ನು ಬಳಸಿ

ತಿ.ನರಸೀಪುರ ಸೆ.23. ಗರ್ಭಿಣಿಯರು ಹಾಗೂ ಮಗುವಿನ ಹಾರೈಕೆಗೆ ಅಗತ್ಯ ಪೌಷ್ಟಿಕ ಆಹಾರಗಳನ್ನು ಬಳಸುವಂತೆ ಡಾ. ನೂತನ್ ಕರೆ ನೀಡಿದರು.
ಇಲ್ಲಿಗೆ ಸಮೀಪದ ಗಣಗನೂರು ಗ್ರಾಮದಲ್ಲಿ ಜಿಲ್ಲಾಡಳಿತ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ಪೋಷಣಾ ಅಭಿಯಾನ ಮಾಸಾಚರಣೆಯ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ಸೆಪ್ಟಂಬರ್‍ನಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಮಹಿಳೆಯರಲ್ಲಿ ಅದರಲ್ಲೂ ಗರ್ಭಿಣಿಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಾಗೂ ಮಕ್ಕಳಲ್ಲಿನ ಅಪೌಷ್ಟಿಕತೆ ತಡೆಗಟ್ಟಲು ಮಾರಕವಾದ ಜಾಗೃತಿಯನ್ನು ಈ ಅಭಿಯಾನದಲ್ಲಿ ನೀಡಲಾಗುತ್ತದೆ ಗರ್ಭಿಣಿ ಎಂದು ತಿಳಿದ ನಂತರ ಅವರಿಗೆ ಗರ್ಭದಲ್ಲಿರುವ ಮಗು ಆರೋಗ್ಯ ಬೆಳೆಯಲು ಕಬ್ಬಿಣದಂಶಗಳಿರುವ ಮಾತ್ರೆಗಳನ್ನು ನೀಡಲಾಗುತ್ತಿದೆ. ರಕ್ತ ಹೀನತೆ ಕಂಡು ಬಂದಲ್ಲಿ ರಕ್ತದ ಪ್ರಮಾಣ ಹೆಚ್ಚಾಗಲು ಅಗತ್ಯ ಸೊಪ್ಪು ತರಕಾರಿಗಳನ್ನು ಸೇವಿಸಬೇಕು. ಎಂದು ತಿಳಿಸಿದರು.
ತಾ.ಪಂ.ಸದಸ್ಯ ಮಹದೇವಸ್ವಾಮಿ, ಗ್ರಾ.ಪಂ.ಉಪಾಧ್ಯಕ್ಷೆ ರೇವಮ್ಮ, ಅಂಗನವಾಡಿ ಕಾರ್ಯಕರ್ತೆಯರು ಪುಟ್ಟಮ್ಮ, ಶಿವಮ್ಮ, ಮಮತ, ರಾಜಮ್ಮ, ಪದ್ಮಾವತಿ, ಎಸ್.ಶಿವಮ್ಮ, ರತ್ನಮ್ಮ, ನೀಲಮ್ಮ, ರಾಜೇಶ್ವರಿ ಹಾಗೂ ಗ್ರಾಮದವರು ಇದ್ದರು.

Leave a Comment