ಅಗತ್ಯಕ್ಕೆ ರಕ್ಕ ಉದ್ಯೋಗ ಸೃಷ್ಟಿಯಾಗದೇ ನಿರುದ್ಯೋಗ ಸಮಸ್ಯೆ ಹೆಚ್ಚಳ

ಬಳ್ಳಾರಿ: ಪದವಿಧರರ ಸಂಖ್ಯೆ ದಿನದಿಂದ ದಿನಕ್ಕೆ ಅಪರಿಮಿತವಾಗಿ ಹೆಚ್ಚುತ್ತಿದ್ದು, ಅದಕ್ಕೆ ಸಮಾನವಾಗಿ ಉದ್ಯೋಗ ಅವಕಾಶಗಳು ಸೃಷ್ಠಿಯಾಗದೇ ಇರುವುದು ನಿರುದ್ಯೋಗ ಸಮಸ್ಯೆ ಇಂದು ಪೆಡಂಭೂತವಾಗಿ ಬೆಳೆಯಲು ಕಾರಣವಾಗಿದೆ ಎಂದು ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಗೋನಾಳ ರಾಜಶೇಖರ ಗೌಡ ಅಭಿಪ್ರಾಯಪಟ್ಟರು.

ಸ್ಥಳೀಯ ವೀರಶೈವ ಮಹಾವಿದ್ಯಾಲಯ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವಿಶ್ವ ಕೌಶಲ್ಯ ದಿನಾಚರಣೆ ಪ್ರಯುಕ್ತ ಸಂಯುಕ್ತವಾಗಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಸಿ ಮಾತನಾಡಿದ ಅವರು, ದುಡಿಯುವ ಸಾಮಥ್ರ್ಯ ಇರುವವರಿಗೆ ಉದ್ಯೋಗ ಸಿಗದೇ ಇರುವುದು ಹಲವು ವೈಯಕ್ತಿಕ ಹಾಗೂ ಸಾಮಾಜಿಕ ಸವiಸ್ಯೆಗಳಿಗೆ ಕಾರಣವಾಗಿದೆ ಎಂದರು.

ಬದುಕು ರೂಪಿಸಿಕೊಡುವ ಶಿಕ್ಷಣದ ಅವಶ್ಯಕತೆ ಇದೆ. ಪ್ರಾಯೋಗಿಕ ಮತ್ತು ವ್ಯವಹಾರಿಕವಾಗಿ ಉಪಯುಕ್ತವಾಗುವ ಜ್ಞಾನ ಮತ್ತು ಕೌಶಲಗಳ ಬೆಳೆವಣೆಗೆಗೆ ಶಿಕ್ಷಣ ಸಂಸ್ಥೆಗಳು ಹೆಚ್ಚು ಮಹತ್ವಕೊಡಬೇಕು. ಪರಿಸರ ಸ್ನೇಹಿ ಉದ್ಧೀಮೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕೆಂದು ಸೂಚಿಸಿದರು.

ಕೇವಲ ಪಠ್ಯ ಪುಸ್ತಕಗಳಲ್ಲಿಯ ಜ್ಞಾನದಿಂದ ಶಿಕ್ಷಣ ಪೂರ್ಣವಾಗುವುದಿಲ್ಲ. ಪಾಲ್ಗೋಳ್ಳುವಿಕೆ ಹಾಗೂ ಅನುಭವಗಳ ಮೂಲಕ ಸಂಪಾದಿಸಿದ ಜ್ಞಾನ ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಸರಳವಾಗಿ ಪರಿಹಾರ ನೀಡಬಲ್ಲವು. ಆದ್ದರಿಂದ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವೈವಿಧ್ಯಮಯ ಅನುಭವಗಳನ್ನು ಸಂಪಾದಿಸಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಹಟ್ಟಪ್ಪ ಮಾತನಾಡಿ, ವಿವಿಧ ಮಟ್ಟದ ಶಿಕ್ಷಣ ಪಡೆದ ಯುವಕರಲ್ಲಿ ಉದ್ಯೋಗ ಕೌಶಲ್ಯ ಬೆಳಸಲು ಸರ್ಕಾರ ಅನುಷ್ಠಾನಕ್ಕೆ ತಂದ ಕಾರ್ಯಕ್ರಮಗಳನ್ನು ವಿವರಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ 54 ಸಾವಿರ ಯುವಕರು ಕೌಶಲ್ಯ ತರಬೇತಿ ಪಡೆಯಲು ಹೆಸರು ನೋಂದಾಯಿಸಿರುತ್ತಾರೆ ಎಂದು ತಿಳಿಸಿದರು. ಇದುವರೆಗೆ 4 ಸಾವಿರ ಜನರಿಗೆ ಬೇರೆ ಬೇರೆ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗಿರುತ್ತದೆ. ಉಳಿದವರಿಗೆ ನಂತರದ ದಿನಗಳಲ್ಲಿ ಹಂತ ಹಂತವಾಗಿ ತರಬೇತಿ ನೀಡಿ ವಿವಿಧ ಸಂಘ ಸಂಸ್ಥೆಯವರನ್ನು ಆಹ್ವಾನಿಸಿ ಉದ್ಯೋಗ ಮೇಳವನ್ನು ಆಯೋಜಿಸಿ ಉದ್ಯೋಗ ಪಡೆದುಕೊಳ್ಳಲು ಅವಕಾಶ ಮಾಡಕೊಡಲಾಗುವುದು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಜಿ.ರಾಜಶೇಖರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಉದ್ಯೋಗ ಅವಕಾಶಗಳು ವಿಪುಲವಾಗಿದ್ದು ಅವುಗಳನ್ನು ಸದ್ಭಳಿಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಸರ್ವ ರೀತಿಯ ಸಾಮಥ್ರ್ಯ ಬೆಳಸಿಕೊಳ್ಳಬೇಕೆಂದು ತಿಳಿಸಿದರು.

ಕೆಲವು ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳಿದ್ದರೂ ಬಹಳಷ್ಟು ಪದವಿಧರರಲ್ಲಿ ಆ ಉದ್ಯೋಗ ನಿರ್ವಹಿಸಲು ಅವಶ್ಯಕವಿರುವ ಕೌಶಲ್ಯದ ಕೊರತೆ ಇರುವುದರಿಂದಲೇ ಅವರು ಉದ್ಯೋಗಗಳಿಂದ ದೂರ ಉಳಿಯುವುತ್ತಿದ್ದಾರೆ ಎಂದು ವಿಷಾದಿಸಿದರು.
ಒಟ್ಟು 21 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೋಂಡು ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಯಿತು. ಸುಮಾರು 600 ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಸಿದ್ಧರಾಮ ಜಿ ಮುಳಜೆ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ನಿರುಪಮ ಪ್ರಾರ್ಥನಾ ಗೀತೆ ಹಾಡಿದರು.

Leave a Comment