ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ರಾಯಚೂರು.ಅ.17- ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕಳೆದ 17 ವರ್ಷಗಳಿಂದ ವೇತನ ಮತ್ತು ಪಿಂಚಣಿ ಹಾಗೂ ಇತರೆ ಯಾವುದೇ ಸೌಲಭ್ಯ ನೀಡದೇ ಮೋಸ ಮಾಡಲಾಗುತ್ತಿದೆಂದು ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಆರೋಪಿಸಿದೆ.
ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಯ ಸಚಿವರಾದ ಸುರೇಶ ಕುಮಾರ ಅವರಿಗೆ ಮನವಿ ಮಾಡಿದರು. 2001-02 ರ ಅವಧಿಯಲ್ಲಿ ಅಕ್ಷರ ದಾಸೋಹ ಆರಂಭಗೊಂಡಿದೆ. ಆದರೆ, ಅಕ್ಕಿ ಅನ್ನ ಆಗಬೇಕು. ಅನ್ನ ಬೇಯಿಸಲು ತಗಲುವ ಖರ್ಚು ಮಾತ್ರ ನಮಗೆ ಸಂಬಂಧ. ಉದ್ಯೋಗಿಗಳು ಲೆಕ್ಕವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ. ಕಳೆದ 17 ವರ್ಷಗಳಿಂದ ನೌಕರರಿಗೆ ವೇತನ, ಪಿಂಚಣಿ ಇತರೆ ಯಾವುದೇ ಸೌಲಭ್ಯಗಳು ನೀಡದೇ, ಮೇಲಿಂದ ಮೇಲೆ ವಂಚಿಸಲಾಗುತ್ತಿದೆ.
ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ದುಡಿಯುವ ಮಹಿಳೆಯರಿಗೆ ಕೇವಲ 2600-2700 ತಿಂಗಳ ಸಂಬಳ ಬಿಟ್ಟರೇ, ಬೇರೆ ಯಾವ ಸವಲತ್ತುಗಳಿಲ್ಲ. ಬಡ ಮಹಿಳೆಯರು ನಿವೃತ್ತ ಹಂಚಿನಲ್ಲಿದ್ದಾರೆ. ರಾಜ್ಯದಲ್ಲಿ 1,18,000 ಮಹಿಳೆಯರು ದುಡಿಯುತ್ತಿದ್ದಾರೆ. ಅತ್ಯಂತ ಕಡಿಮೆ ವೇತನದಲ್ಲಿ 100 ರೂ. ಕಡಿತಗೊಳಿಸಿ, ಎಲ್ಐಸಿ ಮುಖಾಂತರ ವಿಶೇಷ ಪಿಂಚಣಿ ಯೋಜನೆ ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು.
ಆದರೆ, ಇಲ್ಲಿವರೆಗೂ ಯಾವುದೇ ಅನುಕೂಲವಾಗಿಲ್ಲ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ, ಶರಣಬಸವ, ಕೆ.ಜಿ.ವೀರೇಶ, ಗಿರಿಯಪ್ಪ, ವರಲಕ್ಷ್ಮೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment