ಅಕ್ರಮ ಹಣ ಸಾಗಾಟ: ಇಬ್ಬರು ವಶಕ್ಕೆ

ಕಾರವಾರ,ಫೆ19- ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ೫೬ ಲಕ್ಷ ರೂ. ಗಳನ್ನು ಶಿರಸಿಯಲ್ಲಿ ಪೋಲಿಸರು ಮಂಗಳವಾರ ವಶಪಡಿಸಕೊಂಡಿದ್ದಾರೆ.
ಸಿದ್ದಾಪುರ ತಾಲೂಕಿನ ಹೆರೂರಿನ ಅಬ್ದುಲ್‌ ಸೌದ್‌ (೪೨) ಮತ್ತು ಅಬ್ದುಲ್‌ ಮುಥಲೀಪ್‌ (೩೧) ಆರೋಪಿಗಳು. ಇವರು ಮಂಗಳವಾರ ಸಂಜೆ ಡಸ್ಟರ್‌ ಕಾರಿನಲ್ಲಿ (ಕೆಎ ೩೧ ಎನ್ ೨೬೨೮) ಯಾವುದೇ ದಾಖಲೆಗಳಿಲ್ಲದೇ ೫೬ ಲಕ್ಷ ರೂ. ನಗದನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಚಿಪಗಿಯ ತನಿಖಾ ಠಾಣೆಯ ಬಳಿ ತಪಾಸಣೆ ನಡೆಸಿದ ಡಿವೈಎಸ್ಪಿ ಜಿ.ಟಿ.ನಾಯಕ ನೇತೃತ್ವದ ಪೋಲಿಸರ ತಂಡ ಆರೋಪಿಗಳಿಂದ ಅಕ್ರಮ ನಗದನ್ನು ವಶಪಡಿಸಿಕೊಂಡಿದ್ದಾರೆ. ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಅಡಿಕೆ ವ್ಯಾಪಾರಸ್ಥರು ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಶಾಂತ, ಕೊಟ್ರೇಶ್‌, ಅನ್ಸಾರಿ ಇನ್ನಿತರರು ಇದ್ದರು.

Leave a Comment