ಅಕ್ರಮ ಮರ ಸಾಗಿಸುತ್ತಿದ್ದ ಇಬ್ಬರ ಬಂಧನ

ಪಿರಿಯಾಪಟ್ಟಣ: ಸೆ.12- ಹುಣಸೂರು ವನ್ಯಜೀವಿ ವಲಯದ ಮುತ್ತೂರು ಅರಣ್ಯ ಪ್ರದೇಶದ ಸಿಪಿಟಿ 8 ರಲ್ಲಿ ಅಕ್ರಮವಾಗಿ ಮರ ಕಡಿದು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ 5 ಸಾಗುವಾನಿ ತುಂಡುಗಳನ್ನು ಅರಣ್ಯಾಧಿಕಾರಿಗಳು ವಸಪಡಿಸಿಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಹಳೆಕೆರೆ ಹಾಡಿಯ ಮಣಿ, ಜಡಿಯಾ ಅರಣ್ಯದಲ್ಲಿ ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್.ಎಫ್.ಒ ಹನುಮಂತರಾಜು, ಡಿ.ಆರ್.ಎಫ್.ಒ ಪ್ರಸನ್ನಕುಮಾರ್, ರತ್ನಕರ ಸಿಬ್ಬಂದಿಗಳಾದ ಜಯರಾಮ್, ರಘು, ಪರಮೇಶ್ ಭಾಗವಹಿಸಿದ್ದರು.
11ಪಿವೈಪಿ02:ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು ಅರಣ್ಯ ಪ್ರದೇಶದಲ್ಲಿ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬುಧವಾರ ಬಂಧಿಸಿದ್ದಾರೆ.

Leave a Comment