ಅಕ್ರಮ ಮರಳು ಸಾಗಾಟ: ಲಾರಿಗಳು ಪೊಲೀಸ್ ವಶ

ಮಂಗಳೂರು, ಸೆ.೧೨- ಅಕ್ರಮ ಮರಳು ಸಾಗಾಟದ ಆರೋಪದಲ್ಲಿ ಮರಳು ಸಹಿತ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ. ಪೊಲೀಸ್ ನಿರೀಕ್ಷಕರು ಠಾಣಾ ಸಿಬ್ಬಂದಿಯೊಂದಿಗೆ ಗಸ್ತು ಸಂಚರಿಸುತ್ತಾ ಮೂಡಬಿದ್ರೆಯ ನಿಡ್ಡೋಡಿ, ಪುತ್ತಿಗೆ, ಕಡಲಕೆರೆ ಕಡೆಗಳಲ್ಲಿ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಲಾರಿಯಲ್ಲಿ ಮರಳು ತುಂಬಿರುವುದು ಕಂಡುಬಂದಿದ್ದು ಯಾವುದೇ ಪರವಾನಿಗೆ ಇರಲಿಲ್ಲ. ನಾಲ್ಕು ಲಾರಿಗಳನ್ನು ವಶಕ್ಕೆ ಪಡೆದು ಲಾರಿಗಳನ್ನು ಹಾಗೂ ಅದರಲ್ಲಿ ತುಂಬಿರುವ ಮರಳನ್ನು ಮುಂದಿನ ಕ್ರಮದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಶಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Comment