ಅಕ್ರಮ ಮದ್ಯ ಮಾರಾಟ ತಡೆಗೆ ತಂಡ ರಚಿಸಿ:ಹಿರೇಮಠ

ಕಲಬುರಗಿ ಜೂ 21: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ದಕ್ಷ       ಅಧಿಕಾರಿಗಳ ವಿಶೇಷ ತಂಡ ರಚಿಸುವಂತೆ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಅವರು ಇಂದು ಸುದ್ದಿಗೋಷ್ಠಿಯಲ್ಲಿ  ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.ಜಿಲ್ಲೆಯಲ್ಲಿ ಸುಮಾರು 4 ಸಾವಿರ ಮತ್ತು  ಅಳಂದ ತಾಲೂಕಿನಲ್ಲಿಯೇ  450 ಅಕ್ರಮ ಮದ್ಯ ಮಾರಾಟಗಾರರಿದ್ದಾರೆ.ಗ್ರಾಮೀಣ ಭಾಗದ ಕಿರಾಣಿ ಅಂಗಡಿ,ಚಹಾದಂಗಡಿ,ಬೀಡಾ ಅಂಗಡಿ, ಮನೆಗಳಲ್ಲಿಯೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.ಇದು ಗ್ರಾಮೀಣ ಜನರ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.ಇದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ರಚಿಸಬೇಕು.ಬಿಹಾರ ಮಾದರಿಯಲ್ಲಿ ಅಕ್ರಮ ಮದ್ಯ ಮಾರಾಟಗಾರರನ್ನು ಬಂಧಿಸಿ 6 ತಿಂಗಳವರೆಗೆ ಜಾಮೀನು ಸಿಗದಂತೆ ಮಾಡಿ ಅವರ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿದರೆ  ನಿಯಂತ್ರಣಕ್ಕೆ ತರಬಹುದು ಎಂದರು. ಕೃಷಿ ಇಲಾಖೆಯ ರೈತ ಅನುವುಗಾರರನ್ನು ಬಹುಬೇಗನೆ ಪುನರ್ ನೇಮಕ ಮಾಡಿಕೊಂಡು ಅವರಿಗೆ 10 ಸಾವಿರ ರೂ ಮಾಸಿಕ ವೇತನ ನಿಗದಿಪಡಿಸುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲೀಲ್ ಅನ್ಸಾರಿ, ವೆಂಕಟೇಶ,ಹರ್ಷ,ಹಣಮಂತ, ವಿಜಯಕುಮಾರ ಪಾಟೀಲ ಉಪಸ್ಥಿತರಿದ್ದರು..

Leave a Comment