ಅಕ್ರಮ ಬಾಂಗ್ಲಾ ವಲಸಿಗರ ವಾಪಸ್ಸು ಕಳುಹಿಸಲು ಆಗ್ರಹ

ಬೆಂಗಳೂರು, ಆ.೧೧-  ಅಕ್ರಮ ವಾಗಿ ನುಸುಳುವ ಬಾಂಗ್ಲಾ ದೇಶದ ಪ್ರಜೆಗಳು ಕರ್ನಾಟಕದಲ್ಲಿ ಅಪಾರ ಸಂಖ್ಯೆಯಲ್ಲಿ ನೆಲೆಸಿದ್ದು, ಅವರನ್ನು ಈ ಕೂಡಲೇ ವಾಪಸ್ಸು ಕಳುಹಿಸಬೇಕು  ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಹಿಂದೂ ಜನಜಾಗೃತಿ ವೇದಿಕೆ ಸದಸ್ಯರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬಾಂಗ್ಲಾ ದೇಶದ ನಿವಾಸಿಗಳು ಅಕ್ರಮವಾಗಿ ವಾಸ ಮಾಡುತ್ತಿದ್ದಾರೆ. ಇದರಿಂದ ದೇಶದ ಆಂತರಿಕ ಭದ್ರತೆ ಧಕ್ಕೆಯಾಗುತ್ತಿದೆ. ಅಸ್ಸಾಂ ರಾಜ್ಯವೊಂದರಲ್ಲೇ ೪೦ ಲಕ್ಷಕ್ಕೂ ಅಧಿಕ ಅಕ್ರಮ ವಲಸಿಗರು ಇರುವುದು ಆತಂಕ ತಂದಿದೆ. ಇಡೀ ದೇಶದಲ್ಲಿ ಕೋಟ್ಯಂತರ ಅಕ್ರಮ ನುಸುಳುಕೋರರು ಇದ್ದಾರೆ. ಅವರನ್ನು ಹೊರಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನುಸುಳುಕೋರರಿಂದ ಭಾರತದಲ್ಲಿ ಸಾಮಾಜಿಕ, ಆರ್ಥಿಕ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಅನೈತಿಕ ಚಟುವಟಿಕೆಗಳಿಗೂ ದಾರಿಯಾಗುತ್ತಿದೆ. ಈಗಾಗಲೆ ಉದ್ಯೋಗವಿಲ್ಲದೆ ಇರುವ ಯುವಕರು ಇದರಿಂದ ಮತ್ತಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಕೂಡಲೆ ಎಲ್ಲ ರಾಜ್ಯ ಸರ್ಕಾರಗಳು ಅಕ್ರಮ ವಲಸಿಗರನ್ನು ಹೊರಹಾಕಲು ನಿರ್ಧರಿಸಬೆಕು ಒತ್ತಾಯಿಸಿದರು.

ಅಸ್ಸಾಂನಲ್ಲಿ ಬಾಂಗ್ಲಾ ದೇಶಿ ನುಸುಳುಖೋರ ಯಾರು ಮತ್ತು ಮೂಲ ಆಸ್ಸಾಮಿ ಯಾರು, ಇದರ ಮಾಹಿತಿಯನ್ನು ನೀಡುವ ‘ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಝನ್’ನ ಪ್ರಾಥಮಿಕ  ವರದಿ ಬಿಡುಗಡೆ ಮಾಡಲಾಯಿತು.ಆದರೆ, ಈ ಬಗ್ಗೆ ರಾಜಕೀಯ ಪಕ್ಷಗಳು ಗೊಂದಲವನ್ನುಂಟುಮಾಡಲು ಆರಂಭಿಸಿದ್ದಾರೆ.

ಆದರೆ, ದೇಶದ ಭದ್ರತೆ,ವ್ಯಾಪಾರ, ವಹಿವಾಟು ಮತ್ತು ಸಾಮಾನ್ಯ ಜೀವನಕ್ಕೆ ಕಂಟಕವಾಗಿದೆ. ಸುಪ್ರೀಂ ಪೌರತ್ವ ಅಭಿಯಾನದಲ್ಲಿ ನುಸುಳುಕೋರರ ಮಾಹಿತಿ ಲಭ್ಯವಾಗಿದ್ದು, ಕೇಂದ್ರ ಸರಕಾರ ಕೂಡಲೇ ಬಾಂಗ್ಲಾ ದೇಶಿಗರನ್ನು ಹೊರಹಾಕುವಂತೆ ಪ್ರಧಾನಿ ಮೋದಿ ಅವರನ್ನು ಕೋರಿದರು. ಪ್ರತಿಭಟನೆಯಲ್ಲಿ ಸಮಿತಿಯ ಶಿವರಾಂ, ಭವ್ಯಾ, ನವೀನ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Leave a Comment