ಅಕ್ರಮ ಅನ್ನಭಾಗ್ಯಯೋಜನೆಯ ಅಕ್ಕಿ-ಗೋಧಿ ವಶ

ಹರಿಹರ, ಜು. 17 – ಹರಿಹರದ ಕೈಗಾರಿಕಾ ಪ್ರದೇಶದಲ್ಲಿರುವ ಗೋದಾಮ್ ಒಂದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ರಮವಾಗಿ ಸಂಗ್ರಹಿಸಲಿಟ್ಟಿದ್ದ ಅಕ್ಕಿ ಮತ್ತು ಗೋಧಿಯನ್ನು ವಶಪಡಿಸಿಕೊಡಲಾಗಿದೆ ದಾವಣಗೆರೆಯ ಡಿವೈಎಸ್ ಪಿ ಮಂಜುನಾಥ್ ಗಂಗಲ್ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಮತ್ತು ಗೋಧಿಯನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 250 ರಿಂದ 300 ಚೀಲ ಅಕ್ಕಿ ದೊರೆತಿದ್ದು, ಅನ್ನಭಾಗ್ಯದ ಈ ಅಕ್ಕಿಯನ್ನು ಪಾಲೀಶ್ ಮಾಡಿ ಬೇರೆ ಬ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment