ಅಕ್ರಮವಾಗಿ ಸಾಗಿಸುತ್ತಿದ್ದ ಪೇಂಟ್, ಅಡುಗೆಎಣ್ಣೆ ವಶ

ವಿಜಯಪುರ ಮೇ 14: ಅಕ್ರಮವಾಗಿ  ಮಿನಿಲಾರಿಯಲ್ಲಿ ಸಾಗಿಸುತ್ತಿದ್ದ  ಪೇಂಟ್ ಮತ್ತು ಅಡುಗೆ ಎಣ್ಣೆಯನ್ನು ಗಾಂಧಿಚೌಕ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಮಲ್ಲಿಕಾರ್ಜುನ ನಗರದಲ್ಲಿ ಕಾರ್ಯಾಚರಣೆಯನ್ನು ನಡೆಸಿದ ಪೊಲೀಸರು  ಪೇಂಟ್ ಮತ್ತು ಅಡುಗೆ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ.ಇದರ  ಮೌಲ್ಯ 6 ಲಕ್ಷ ರೂ ಎಂದು ಅಂದಾಜಿಸಲಾಗಿದೆ.  ಮಿನಿ ಲಾರಿ ಚಾಲಕ ಮತ್ತು ಕ್ಲೀನರ್‍ನನ್ನು ವಶಕ್ಕೆ ಪಡೆಯಲಾಗಿದೆ.

ಗಾಂಧಿಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment