ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

ಬಳ್ಳಾರಿ, ಮೇ.23: ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ನಗರದ ಕೊಳಗಲ್ಲು ರಸ್ತೆಯಲ್ಲಿ ಸಾರ್ವಜನಿಕರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.

ಕೊಳಗಲ್ಲಿನಿಂದ-ಬಂಡಿಹಟ್ಟಿಗೆ ಟಾಟಾ ಏಸ್ ಗಾಡಿಯಲ್ಲಿ 2 ಎಮ್ಮೆ, ಆಕಳು, ಕರುವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದನ್ನು ಕಂಡ ಜನ ಗಾಡಿ ನಿಲ್ಲಿಸಿ ವಿಚಾರಿಸಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಜಾನುವಾರು ಬಿಡುವಂತೆ ಸಾಗಾಣೆದಾರನಿಗೆ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಜಯರಾಂ ಚೌದರಿ ಮತ್ತಿತರರು ಸೂಚಿಸಿದರು. ಅದಕ್ಕೆ ಸಾಗಾಣೆದಾರ ನಿರಾಕರಿಸಿದ್ದಕ್ಕೆ ಕೌಲ್ ಬಜಾರ್ ಪೊಲೀಸರಿಗೆ ಕರೆ ಮಾಡಿದರು.

ಪೊಲೀಸರು ಬಂದು ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸಿ ಸಾಗಾಣೆದಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment