ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 2 ಟ್ರ್ಯಾಕ್ಟರ್ ಜಪ್ತಿ

 

ಕಲಬುರಗಿ,ಜು.12-ತಾಲ್ಲೂಕಿನ ಮೈನಾಳ ಹತ್ತಿರ ಭೀಮಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ದಾಳಿ ನಡೆಸಿರುವ ಫರತಾಬಾದ ಪೊಲೀಸರು 2 ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ.

ಮರಳು, ಟ್ರ್ಯಾಕ್ಟರ್ ಸೇರಿ 2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಟ್ರ್ಯಾಕ್ಟರ್ ಚಾಲಕರು ಪರಾರಿಯಾಗಿದ್ದಾರೆ. ಫರತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment