ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಪ್ಪರ್ ಜಪ್ತಿ

 

ಕಲಬುರಗಿ,ಜೂ.18-ಅಫಜಲಪುರ ತಾಲ್ಲೂಕಿನ ಗುಡ್ಡೆವಾಡಿ ಗ್ರಾಮದ ಭೀಮಾ ನದಿಯಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಅಫಜಲಪುರ ಮಾರ್ಗವಾಗಿ ಬಳೂರ್ಗಿ ಕಡೆ ಹೋಗುತ್ತಿದ್ದ ಟಿಪ್ಪರ್ ಗಳನ್ನು ಜಪ್ತಿ ಮಾಡಲಾಗಿದೆ.

ಅಫಜಲಪುರ ಪಿಎಸ್ಐ ಹಾಗೂ ಸಿಬ್ಬಂದಿ ದಾಳಿ ನಡೆಸಿ 10.10 ಲಕ್ಷ ರೂಪಾಯಿ ಮೌಲ್ಯದ ಟಿಪ್ಪರ್ ಮತ್ತು ಮರಳು ಜಪ್ತಿ ಮಾಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ತಹಶೀಲ್ದಾರ ಮದುರಾಜ, ಕರ್ಜಗಿ ವಲಯದ ಕಂದಾಯ ಅಧಿಕಾರಿ ಸಿದ್ದಪ್ಪ ಹೊದಲೂರ, ಅಫಜಲಪುರ ಪಿಎಸ್ಐ ಮಂಜುನಾಥ ಹೂಗಾರ ಮತ್ತು ಸಿಬ್ಬಂದಿ ದಾಳಿ ನಡೆಸಿ ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ 80 ಸಾವಿರ ರೂಪಾಯಿ ಮೌಲ್ಯದ 8 ಟಿಪ್ಪರ್ ಮರಳು ಜಪ್ತಿ ಮಾಡಿದ್ದಾರೆ.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Comment