ಅಕ್ರಮವಾಗಿ ಮದ್ಯ ಸಾಗಾಟ- ಆರೋಪಿಯ ಬಂಧನ

ಪುತ್ತೂರು, ಆ.೨೭- ಪುತ್ತೂರು ಅಬಕಾರಿ ಪೊಲೀಸರು ಖಾಸಗಿ ಆಟೋ ರಿಕ್ಷಾವೊಂದರಲ್ಲಿ ಅಕ್ರಮವಾಗಿ ಮದ್ಯಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿ ಭಾನುವಾರ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಅಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ನೂಜಿಬಾಳ್ತಿಲ ಗ್ರಾಮದ ಬಳ್ಳೇರಿ ನಿವಾಸಿ ಮುತ್ತಪ್ಪ ಗೌಡ ಅವರ ಪುತ್ರ ಸತ್ಯಾನಂದ ಗೌಡ(೪೭ವ) ಬಂಧಿತ ಆರೋಪಿ.
ಆರೋಪಿ ಕಲ್ಲುಗುಡ್ಡೆಯಿಂದ ಕೋಣಾಜೆಗೆ ಹೋಗುವ ರಸ್ತೆಯಲ್ಲಿ ಖಾಸಗಿ ಅಟೋ ರಿಕ್ಷಾದಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿ ರಿಕ್ಷಾದ ಚಾಲಕ ಸೀಟಿನ ಅಡಿಯಲ್ಲಿ ಇಟ್ಟಿದ್ದ ೮೯ ಮದ್ಯದ ಬಾಟಲಿಗಳಿದ್ದ ೧ ಬಾಕ್ಸ್ (೬ಲೀ) ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಮದ್ಯದ ಮೌಲ್ಯ ರೂ. ೩೧೨೦ ಮತ್ತು ಆಟೋ ರಿಕ್ಷಾದ ಮೌಲ್ಯ ರೂ. ೫೦ಸಾವಿರ ಎಂದು ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ. ಅಬಕಾರಿ ಉಪಅಧೀಕ್ಷಕ ಮುರಳೀಧರ ಮತ್ತು ಪುತ್ತೂರು ವಲಯ ನಿರೀಕ್ಷಕ ಸುಬ್ರಹ್ಮಣ್ಯ ಪೈ ಅವರ ಮಾರ್ಗದರ್ಶನದಲ್ಲಿ ಪುತ್ತೂರು ವಲಯ ಅಬಕಾರಿ ಉಪ ನಿರೀಕ್ಷಕ ಅಂಗಾರ ಪಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿ ಪ್ರೇಮಾನಂದ, ಸುಕುಮಾರ್, ಶ್ರೀಕಾಂತ್, ಸಂಕೇತ್, ಚಾಲಕ ಸಚಿನ್ ಪಾಲ್ಗೊಂಡಿದ್ದರು.

Leave a Comment