ಅಕ್ಟೋಬರ್ 13ರಿಂದ 22ರವರೆಗೆ ಮುರುಘಾಮಠದಿಂದ ಶರಣಸಂಸ್ಕತಿ ಉತ್ಸವ

ಚಿತ್ರದುರ್ಗ,ಆ,5 : ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಶ್ರೀಮುರುಘಾಮಠದ ವತಿಯಿಂದ ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿರುವ ಮಧ್ಯಕರ್ನಾಟಕದ ದಸರಾ ಮಹೋತ್ಸವ ಎಂದೇ ಹೆಸರಾಗಿರುವ ಶರಣಸಂಸ್ಕೃತಿ ಉತ್ಸವವನ್ನು ಈ ವರ್ಷ 13-10-2018ರಿಂದ 22-10-2018ರವರೆಗೆ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀಮಠದಲ್ಲಿ ನಡೆದ ಶರಣಸಂಸ್ಕೃತಿ ಉತ್ಸವ-2018ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಈ ಬಾರಿ ಉತ್ಸವ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳವರನ್ನು, ಕಾರ್ಯಾಧ್ಯಕ್ಷರನ್ನಾಗಿ ಸಿದ್ದಾಪುರದ ವರ್ತಕ ಪಟೇಲ್ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಲ್ಲ ಶಾಸಕರುಗಳು, ಮಾಜಿ ಸಚಿವ ಹೆಚ್.ಆಂಜನೇಯ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್, ಹನುಮಲಿ ಷಣ್ಮುಖಪ್ಪ, ಕೆ.ಸಿ.ವೀರೇಂದ್ರ (ಪಪ್ಪಿ) ಇವರುಗಳು ಸಮಿತಿಯ ಅಧ್ಯಕ್ಷರುಗಳಾಗಿರುತ್ತಾರೆ ಎಂದರು.
ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಮಾತನಾಡಿ, ಶರಣಸಂಸ್ಕøತಿ ಉತ್ಸವ ಎಂದರೆ ವಿಶೇಷವಾಗಿರುತ್ತದೆ. ದಸರಾ ಉತ್ಸವ ರಾಜಮನೆತನದಿಂದ ಆಚರಿಸುತಿದ್ದರೆ, ಇದು ಬಸವಾದಿ ಶರಣರ ಆಶಯಗಳನ್ನು ಬಿತ್ತರಿಸುವ ಕಾರ್ಯಕ್ರಮವಾಗಿದೆ. ರಾಜಕೀಯ, ನೀರಾವರಿ, ಶಿಕ್ಷಣ ಮೊದಲಾದ ಕ್ಷೇತ್ರಗಳ ಅಭಿವೃದ್ಧಿಗೆ ಬೆಳಕು ಚೆಲ್ಲುವಂತದ್ದಾಗಿದೆ ಎಂದರು.
ಸಭೆಯಲ್ಲಿ ಶ್ರೀ ಜಗದ್ಗುರು ಪ್ರಸನ್ನ ವಾಲ್ಮೀಕಿ ಮಹಾಸ್ವಾಮಿಗಳು, ಹೆಬ್ಬಾಳು ಶ್ರೀ ಮಹಂತ ರುದ್ರೇಶ್ವರ ಸ್ವಾಮಿಗಳು, ಹಿರಿಯೂರು ಶ್ರೀ ಷಡಕ್ಷರಮುನಿ ಸ್ವಾಮಿಗಳು, ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಶ್ರೀ ಶಿವಬಸವ ಸ್ವಾಮಿಗಳು, ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು, ಶ್ರೀ ಬಸವ ಮಹಾಂತ ಸ್ವಾಮಿಗಳು, ಶ್ರೀ ಬಸವಪ್ರಭು ಸ್ವಾಮಿಗಳು, ಶ್ರೀ ಚೆನ್ನಬಸವ ಸ್ವಾಮಿಗಳು, ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವ ನಾಗೀದೇವ ಸ್ವಾಮಿಗಳು, ಶ್ರೀ ಬಸವ ಹರಳಯ್ಯ ಸ್ವಾಮಿಗಳು, ಶ್ರೀ ಜಯದೇವ ಮಹಾಸ್ವಾಮಿಗಳು, ಶ್ರೀ ಜಯಬಸವೇಶ್ವರ ಸ್ವಾಮಿಗಳು, ಶ್ರೀ ಬಸವ ರಮಾನಂದ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಫಾದರ್ ರಾಜು, ನಗರಸಭೆ ಅಧ್ಯಕ್ಷ ತಿಮ್ಮಣ್ಣ, ಶಂಕರಮೂರ್ತಿ, ಪಟೇಲ್ ಶಿವಕುಮಾರ್, ಎ.ಜೆ. ಪರಮಶಿವಯ್ಯ, ವೀರಶೈವ ಸಮಾಜದ ಅಧ್ಯಕ್ಷ ಎನ್.ಜಯಣ್ಣ ಕೆ.ಎಸ್. ನವೀನ್, ಕೆಇಬಿ ಷಣ್ಮುಖಪ್ಪ, ನಾಗರಾಜ ಸಂಗಮ್, ಆನಂದಮೂರ್ತಿ, ಷರೀಫಾಬಿ, ಸಿ.ಎಂ. ವೀರಣ್ಣ, ಎಲ್.ಬಿ.ರಾಜಶೇಖರ್, ಶ್ರೀಮತಿ ಗಾಯತ್ರಿ ಶಿವರಾಂ, ಕೆ.ಎಂ.ವೀರೇಶ್, ಜಿತೇಂದ್ರ ಸೇರಿದಂತೆ ದಾವಣಗೆರೆ, ಚನ್ನಗಿರಿ, ಹೊಸದುರ್ಗ, ಗದಗ, ನರಗುಂದ, ತುಮಕೂರು, ತಿಪಟೂರು ಮತ್ತು ಜಿಲ್ಲೆಯ ಎಲ್ಲ ಕಡೆಯಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಬಸವರಾಜ ಪಾಟೀಲ ಸ್ವಾಗತಿಸಿದರು. ಪೆÇ್ರ.ಸಿ.ವಿ. ಸಾಲಿಮಠ ನಿರೂಪಿಸಿದರು.

Leave a Comment