ಅಕ್ಕ ತಂಗಿಯ ಬಾಂಧವ್ಯದ ಸಿಂಧೂರ

ಹೊಸ ಹೊಸ ಕಲಾವಿದರು ಬಣ್ಣದ ಬದುಕಿನಲ್ಲಿ ಅದೃಷ್ಟ ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಸಿನಿಮಾದಂತೆ ಕಿರುತೆರೆಯಲ್ಲಿಯೂ ಕೂಡ ಕಲಾವಿದರಿಗೆ ನೆಲೆ ಕಲ್ಪಿಸುತ್ತಿದೆ. ಅಕ್ಕ ತಂಗಿಯರ ಬಾಂಧವ್ಯದ ಮನಮಿಡಿಯುವ ಕಥೆಯನ್ನಾಧರಿಸಿ ಸಿಂಧೂರ ಬರುತ್ತಿದೆ.

ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಳ್ಳಲು ಹೊಸ ಹೊಸ ಪ್ರತಿಭೆಗಳು ಆಗಮಿಸುತ್ತಿದ್ದಾರೆ.ಇದೀಗ ಸಿಂಧೂರ ಮೂಲಕ ಹೊಸ ಪ್ರತಿಭೆಗಳಾದ ಭೂಮಿಕಾ, ಚಂದನಾ, ಗೌತಮ್ ಮತ್ತು ವಿಕಾಸ್ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ

ಅಕ್ಕ-ತಾಯಿಯ ಮತ್ತೊಂದು ಸ್ವರೂಪ. ತಂದೆಯ ಸ್ಥೈರ್ಯ ಮತ್ತು ತಾಯಿಯ ಮಮತೆ ಎರಡೂ ಗುಣಗಳು ಅಕ್ಕನ ಒಳಗಿರುತ್ತದೆ. ಅದೇ ತಂಗಿ ಅಕ್ಕನಿಗೆ ಮಗಳಿದ್ದ ಹಾಗೆ. ಆಕೆ ಎಷ್ಟೇ ಬೆಳೆದರೂ ಅಕ್ಕನ ಪಾಲಿಗೆ ಅವಳು ಮಗುವಿನಂತೆಯೇ. ಇಂಥಾ ಅಕ್ಕ-ತಂಗಿ ಸಂಬಂಧಗಳನ್ನು ನಾವು ನಿತ್ಯ ಜೀವನದಲ್ಲಿ ನೋಡಿರುತ್ತೇವೆ ಆದರೆ ತನ್ನ ತಂಗಿಯ ಬಾಳು ಹಸನಾಗಿಸಲು ತ್ಯಾಗದ ಪರಾಕಾಷ್ಠೆಗೆ ಮುಂದಾಗುವ ಅಕ್ಕನ ಕಥೆ “ಸಿಂದೂರ”. ಇಂಥಾ ಅಪರೂಪದ ಅಕ್ಕ-ತಂಗಿಯರ ಬಾಂಧವ್ಯದ ಮನಮಿಡಿಯುವ ಕಥೆ “ಸಿಂದೂರ”.
ಹೊಸ ಧಾರಾವಾಹಿ ಸಿಂಧೂರ,.ಮಾರ್ಚ್ ೨೦ರಿಂದ ಸೋಮವಾರದಿಂದ ರಾತ್ರಿ ೮ಕ್ಕೆ ಸ್ಟಾರ್ ಸುವರ್ಣ ಮತ್ತೊಂದು ವಿಭಿನ್ನ ರೀತಿಯ ಧಾರವಾಹಿ “ಸಿಂದೂರ” ವನ್ನು ಕನ್ನಡ ವೀಕ್ಷಕರಿಗೆ ನೀಡಲು ರೆಡಿಯಾಗಿದೆ. ಕನ್ನಡ ಧಾರಾವಾಹಿಗಳ ಸಾಲಿನಲ್ಲಿ “ಸಿಂದೂರ” ವಿಶಿಷ್ಟ ಕಥಾ ಹಂದರವನ್ನು ಹೊಂದಿದೆ.
ಅನುಭವಿ ಕಲಾವಿದರಾದ ಸೌಮ್ಯಲತಾ, ಆನಂದ್ ನಾಗರ್‍ಕರ್ ಮತ್ತು ಮುತ್ತುರಾಜ್ ನಟಿಸುತ್ತಿದ್ದಾರೆ. ಈ ನಟರ ಜೊತೆಗೆ ಹೊಸ ಪ್ರತಿಭೆಗಳಾದ ಭೂಮಿಕಾ, ಚಂದನಾ, ಗೌತಮ್ ಮತ್ತು ವಿಕಾಸ್ ಅವರುಗಳನ್ನು ಈ ಧಾರಾವಾಹಿಯಲ್ಲಿ ಪರಿಚಯಿಸುತ್ತಿದ್ದಾರೆ. ತಾಂತ್ರಿಕ ವರ್ಗದಲ್ಲಿ ಪ್ರಖ್ಯಾತ ನಿರ್ದೇಶಕ ಸಕ್ಕರೆಬೈಲು ಶ್ರೀನಿವಾಸ್, ಕ್ಯಾಮಾರಾ ಮ್ಯಾನ್ ನಿಂಗೇಗೌಡ ಮಾರನಹಳ್ಳಿ ಮತ್ತು ಸಂಕಲನಕಾರ ನರಸಿಂಹರಂತಹ ನುರಿತ ತಂಡ ಸಿಂಧೂರಕ್ಕಿದೆ.
ಮನುಷ್ಯ ಸಂಬಂಧಗಳು ನಿಧಾನವಾಗಿ ಕ್ಷೀಣಿಸುತ್ತಿರುವ ಈ ಯಾಂತ್ರಿಕ ಯುಗದಲ್ಲಿ, ಒಡಹುಟ್ಟಿದವರ ಪ್ರೀತಿ ಮತ್ತು ಬಾಂಧವ್ಯವನ್ನು ತೋರಿಸುವ ಪ್ರಾಮಾಣಿಕ ಪ್ರಯತ್ನ ಇದು. ಈ ರೀತಿ ಸಿಂದೂರ ಆಧುನಿಕ ಸಮಕಾಲೀನ ಕಥೆಯ ಧಾರಾವಾಹಿಯಾಗಿ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವುದು ನಿರ್ದೇಶಕರ ಆಯಶ.

Leave a Comment