ಅಕ್ಕಿರೊಟ್ಟಿ, ಜೋಳದ ರೊಟ್ಟಿಗೆ ಕ್ಯಾಟ್ ಫಿದಾ

ಕರುನಾಡ ಆಹಾರದ ರುಚಿಗೆ ಮನಸೋಲದ ಮನಸ್ಸುಗಳಿಲ್ಲ, ವಿಶ್ವದ ನಾನಾ ಕಡೆ ರಾಗಿ ಮುದ್ದೆ ಪ್ರಸಿದ್ದವಾಗಿದ್ದರೇ, ಅಕ್ಕಿ ರೊಟ್ಟಿ, ಜೋಳದ ರೊಟ್ಟಿ ಹಾಗೂ ಫಿಲ್ಟರ್ ಕಾಫಿ ರುಚಿ ಕಂಡವರು ಪದೇ ಪದೇ ಹುಡುಕಿಕೊಂಡು ಹೋಗುವುದು ಸಹಜ. ಇಷ್ಟುಕ್ಕೂ ಯಾಕೆ ರೊಟ್ಟಿಗಳ ಬಗ್ಗೆ ಮಾತು ಅಂತೀರಾ…… ಹೌದು ರೀ ಬಾಲಿವುಡ್ ಬೆಡಗಿ ಕತ್ರಿನಾ ಕೈಪ್‌ಗೆ ಕರ್ನಾಟಕದ ಜೋಳದ ರೊಟ್ಟಿ ಮ್ಯಾಗೆ ಪ್ಯಾರ್‌ಗೆ ಆಗಿದೆ ಅಂತೆ.

#ಈಟiಡಿಣWiಣhಙouಡಿಅiಣಥಿ ಅಭಿಯಾನದಲ್ಲಿ ಭಾಗವಹಿಸಿ ಮಾತಾನಾಡಿದ ಕ್ಯಾಟ್ ಕರುನಾಡ ರುಚಿಗೆ ಮನಸ್ಸು ಸದಾ ಹಾತೊರಿಯುತ್ತದೆ ಎಂದು ಹೆಮ್ಮೆಯಿಂದ ಹೇಳಿದರು.

ಆಹಾರ ಶೈಲಿಗಳ ಕುರಿತು ನೋಡುವುದಾದರೆ ಬೆಂಗಳೂರು ನಿಜಕ್ಕೂ ಒಂದು ಪ್ರಾಯೋಗಿಕವಾದ ನಗರ. ಅತ್ಯುತ್ತಮವಾದ ಸ್ಥಳೀಯ ಆಹಾರದಿಂದ ಹಿಡಿದು ಭಿನ್ನ ವಿಭಿನ್ನ ಶೈಲಿಯ ಪಂಚತಾರಾ ಶೈಲಿಯ ಆಹಾರಗಳು ಕೂಡಾ ಇಲ್ಲಿ ಲಭ್ಯವಾಗುತ್ತದೆ. ಅದರಲ್ಲೂ ಉತ್ತಮ ದೋಸೆ, ಅಕ್ಕಿರೊಟ್ಟಿ ಅಥವಾ ಜೋಳದ ರೊಟ್ಟಿಯೊಂದಿಗೆ ಫಿಲ್ಟರ್ ಕಾಫಿ ಸೇವನೆ ನನ್ನ ಇಷ್ಟದ ಆಹಾರವೆಂದು ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಆಹಾರ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಕತ್ರಿನಾ ಕೈಫ್ ವಿಭಿನ್ನವಾದ ಆಹಾರಗಳನ್ನು ಪ್ರಯತ್ನ ಮಾಡುವುದರಲ್ಲಿ ಮುಂದಾಗಿದ್ದು, ಈ ಅಭಿಯಾನದಲ್ಲಿ ತಮ್ಮ ಆಹಾರ ಶೈಲಿ ಮತ್ತು ವಿಧಾನಗಳ ಕುರಿತು ಮಾತನಾಡಿದರು.

“ನನಗೆ ಬೀದಿಬದಿಯಲ್ಲಿ ಲಭ್ಯವಾಗುವ ಆಹಾರಗಳೆಂದರೆ ಇಷ್ಟ. ಸ್ಥಳೀಯ ಬೀದಿ ಅಂಗಡಿಗಳಲ್ಲಿ ಲಭ್ಯವಾಗುವ ತಿನಿಸುಗಳನ್ನು ಯಾವ ಪ್ರಮಾಣದಲ್ಲಾದರೂ ನಾನು ತಿನ್ನಲು ಸಿದ್ಧ. ಬೆಂಗಳೂರಿನ ವಿವಿಪುರಂ ನಲ್ಲಿರುವ ಬೀದಿ ಆಹಾರ ಮಳಿಗೆಗಳಲ್ಲಿ ಆಹಾರ ಸೇವಿಸು ನಾನು ಉತ್ಸುಕಳಾಗಿರುತ್ತೇನೆ ಎಂದು ತಮ್ಮ ಇಷ್ಟದ ಆಹಾರ ಮಳಿಗೆಯ ಕುರಿತು ತಿಳಿಸಿದರು.

ಶಿಸ್ತು ಮತ್ತು ಫಿಟ್ನೆಸ್ ಫ್ರೀಕ್ ಆಗಿರುವ ಕತ್ರಿನಾ ಕೈಫ್ ಬೆಂಗಳೂರು ತನ್ನ ಹಸಿರಿನಿಂದಲೇ ಹೆಸರಾಗಿದೆ. ಬೆಂಗಳೂರಿನಲ್ಲಿ ಹಸಿರನ್ನು ನಾಶ ಮಾಡಲಾಗುತ್ತಿದೆ ಎಂಬ ಮಾತುಗಳು ಕೆಲವೊಮ್ಮೆ ಕೇಳಿ ಬರುತ್ತದೆ. ಆದರೆ ಬೆಂಗಳೂರು ಇಂದಿಗೂ ಲಾಲ್ ಭಾಗ್ ಹಾಗು ಕಬ್ಬನ್ ಪಾರ್ಕ್‌ನಂತಹ ಹಸಿರಿನ ಲೋಕವನ್ನೇ ತನ್ನೊಳಗೆ ಇಟ್ಟುಕೊಂಡಿದೆ. ಈ ಸ್ಥಳಗಳಲ್ಲಿ ಜಾಗಿಂಗ್ ಹಾಗೂ ಯೋಗಾ ಮಾಡಲು ಅಥವಾ ತಮ್ಮ ಸಾಕುಪ್ರಾಣಿಗಳೊಂದಿಗೆ ನಡೆದಾಡಲು ಸೂಕ್ತ ಎಂದರು.

ಹಸಿರು ಹಾಗೂ ಪರಿಸರ ಪ್ರೇಮಿಯಾಗಿರುವ ಕತ್ರೀನಾ ಕೈಫ್, ಬೆಂಗಳೂರಿನಲ್ಲಿರುವ ಸುಂದರವಾದ ಪಾರ್ಕ್‌ಗಳಲ್ಲಿ ಅಥವಾ ಕಂಠೀರಣ ಕ್ರಿಡಾಂಗಣದಲ್ಲಿ ಓಡಾಡಲು, ನಡೆದಾಡಲು ನನಗೆ ತುಂಬಾನೇ ಇಷ್ಟ. ಸ್ಟೇಡಿಯಂನಲ್ಲಿ ಪ್ರತೀ ದಿನ ಬೆಳಗ್ಗೆ ಹಲವಾರು ಮಂದಿ ತಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳು ನಡೆದಾಡುವುದನ್ನು ನಾವು ನೋಡುತ್ತಿರುತೇವೆ. ನನಗೂ ಅದರ ಭಾಗವಾಗಬೇಕೆಂಬ ಇಚ್ಛೆ ಇದೆ. ಇನ್ನು ಸೈಕ್ಲಿಂಗ್ ಕಡೆಗೂ ಜನರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ನನಗೆ ಇವುಗಳೆಲ್ಲದರ ಭಾಗವಾಗುವ ಆಸಕ್ತಿಯಿದೆ ಎಂದು ಹೇಳಿದ್ದಾರೆ.

Leave a Comment