ಅಕಾಲ ಪ್ರೀತಿಯ ಆರ್ದ್ರತೆಯ ಚಿತ್ರಣ

ಚಿತ್ರ: ನಡುವೆ ಅಂತರವಿರಲಿ

ನಿರ್ದೇಶನ: ರವೀನ್
ತಾರಾಗಣ: ಪ್ರಖ್ಯಾತ್ ಪರಮೇಶ್, ಐಶಾನಿ ಶೆಟ್ಟಿ, ತುಳಸಿ ಶಿವಮಣಿ, ಅಚ್ಯುತ್ ಕುಮಾರ್, ಶ್ರೀನಿವಾಸ ಪ್ರಭು, ಅರುಣ ಬಾಲರಾಜ್ ಮತ್ತಿತರರು.
ರೇಟಿಂಗ್ : ***

ಹದಿ ಹರೆಯದ ಆಕರ್ಷಣೆ, ಅಲೆದಾಟ,ಪ್ರೇಮ,ಕಾಮ ಅಚಾನಕ್ ಆಗಿ ಮಾಡಿದ ತಪ್ಪಿನ ಪರಿತಾಪ, ಪಡಪಾಟಲ ಸುತ್ತ ಎಣೆದಿರುವ ಚಿತ್ರ ” ನಡುವೆ ಅಂತರವಿರಲಿ” ಚಿತ್ರ.
ಓದುವ ಸಯಮದಲ್ಲಿ ಓದಿನ ಕಡೆಗೆ ಗಮನ ಹರಿಸುವುದನ್ನು ಬಿಟ್ಟು ಪ್ರೀತಿಯ ಮೋಹದ ಹಿಂದೆ ಬಿದ್ದರೆ ಅನುಭವಿಸುವ ಸಂಕಷ್ಟಗಳ ಸರಮಾಲೆಯ ಎಳೆಯನ್ನು ಮನಮುಟ್ಟುವ ರೀತಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರವೀನ್ ಕುಮಾರ್.
ಹರೆಯದಲ್ಲಿ ಹುಟ್ಟುವ ಪ್ರೀತಿಗೆ ಆಯಸ್ಸು ಇರುವುದಿಲ್ಲ ಅದು ಬರೀ ಆಕರ್ಷಣೆ ಮತ್ತು ಆ ಕ್ಷಣದ ಕಾಮದ ಹಸಿವನ್ನು ತೀರಿಸಿಕೊಳ್ಳವುದಷ್ಟೇ.ಇಂತಹ ಪ್ರೀತಿಯ ಬಲೆಯಲ್ಲಿ ಬಿದ್ದು ಬದುಕು ಕಳೆದುಕೊಳ್ಳಬೇಡಿ,ಜೊತೆಗೆ ಅಪ್ಪ ಅಮ್ಮನನ್ನು ಬೀದಿಗೆ ತರಬೇಡಿ. ನಿಮ್ಮ ತಪ್ಪಿಗೆ ಏನೂ ಅರಿಯದ ಮುಗ್ದ ಕಂದಮ್ಮನ್ನು ಅನಾಥ ಮಾಡಬೇಡಿ ಎನ್ನುವ ಸಂದೇಶವನ್ನು ಚಿತ್ರದ ಮೂಲಕ ನೀಡು ಪ್ರಯತ್ನ ಮಾಡಿದೆ ಚಿತ್ರತಂಡ.
ಇಂಜಿನಿಯರ್ ವ್ಯಾಸಂಗ ಮಾಡುವ ಸಂಜಯ್( ಪ್ರಖ್ಯಾತ್ ಪರಮೇಶ್) ಅದೇ ಕಾಲೇಜಿನಲ್ಲಿ ಓದುವ ನಿತ್ಯಾ (ಐಶಾನಿ ಶೆಟ್ಟಿ)ಯ ಕಿರುನೋಟಕ್ಕೆ ಫಿಧಾ ಆಗುತ್ತಾನೆ. ಆಕೆಯ ಪ್ರೀತಿಗಾಗಿ ಅಲೆದಾಡಿ ವಿರೋಧದ ನಡುವೆಯೂ ಬಯಸಿದ ಪ್ರೀತಿನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಆ ಪ್ರೀತಿಯಲ್ಲಿ ತೇಲಾಡುತ್ತಾ ಮೈ ಮರೆತು ಒಂದಾಗುವ ಜೋಡಿ ಅದರಿಂದ ಸಂಕಷ್ಟವನ್ನು ಆಹ್ವಾನಿಸಿಕೊಳ್ಳುತ್ತದೆ.
ಎಡವಟ್ಟಿನಿಂದ ಆದ ತಪ್ಪು ಮನೆಯವರನ್ನು ಇಕ್ಕಟ್ಟಿಗೆ ಸಿಲುಕಿಸಿ ಮದುವೆಗೆ ಜಾತಿಯನ್ನು ಅಡ್ಡ ತಂದು ನಿಲ್ಲಿಸುತ್ತದೆ. ಇಂತಹ ಸಮಯದಲ್ಲಿ ಈ ಜೋಡಿಯ ನಿರ್ಧಾರ ಏನು ಮುಂದೇನಾಗಲಿದೆ ಎನ್ನುವುದು ಚಿತ್ರದ ತಿರುಳು.
ಮೊದಲ ಚಿತ್ರದಲ್ಲಿ ಪ್ರಖ್ಯಾತ್ ಪರಮೇಶ್ ಸಹಜವಾಗಿ ಅಭಿನಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನೊಂದಿಷ್ಟು ತರಬೇತಿ ಪಡೆದರೆ ಉತ್ತಮ ನಡನಾಗುವ ಎಲ್ಲಾ ಲಕ್ಷಣಗಳೂ ಇವೆ.
ನಟಿ ಐಶಾನಿ ಶೆಟ್ಟಿ, ಪಾತ್ರವನ್ನು ಆವಾಹಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯ ಕಲಾವಿದರಾದ ತುಳಸಿ ಶಿವಮಣಿ, ಶ್ರೀನಿವಾಸ ಪ್ರಭು, ಅಚ್ಯುತ ಕುಮಾರ್, ಅರುಣ ಬಾಲರಾಜ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಕೆಲ ಪುನರಾವರ್ತಿತ ಸನ್ನಿವೇಶಗಳು ಹಾಗು ಚಿತ್ರಕಥೆಯ ಕಡೆಗೆ ಒಂದಷ್ಟು ಗಮನ ಹರಿಸಿದ್ದರೆ ಇನ್ನೂ ಉತ್ತಮ ಚಿತ್ರ ನೀಡಬಹುದತ್ತು. ಆದರೂ ಚಿತ್ರವನ್ನು ಅಲ್ಲಗಳೆಯುವಂತಿಲ್ಲ.
_ ಚಿಕ್ಕನೆಟಕುಂಟೆ ಜಿ.ರಮೇಶ್

* ಅಷ್ಟಕಷ್ಟೆ/ ** ಸುಮಾರು/ *** ಪರವಾಗಿಲ್ಲ/ **** ಉತ್ತಮ/ ***** ಅತ್ಯುತ್ತಮ

Leave a Comment