ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನಗೊಳಿಸಿದವರ ವಿರುದ್ದ ಸೆ.12 ರಂದು ಬೃಹತ್ ಪ್ರತಿಭಟನೆ

ಜಗಳೂರು,ಸೆ,11;ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನವೆಸಗಿದ ಕಿಡಿಗೇಡಿಗಳನ್ನು ಕುಡಲೆ ಬಂಧಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಹನುಮಂತಾಪುರ ಶಿವಕುಮಾರ್ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ದಲಿತ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನ ಅಣಬೂರು ಗ್ರಾಮದಲ್ಲಿ ಕಳೆದ ಮದ್ಯೆ ರಾತ್ರಿ ನಾಮಫಲಕದಲ್ಲಿನ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿ,ಚಪ್ಪಲಿ ಹಾರ ಹಾಕುವ ಮೂಲಕ ರಾಷ್ಟ್ರ ನಾಯಕರನ್ನು ಅವಮಾನಗೊಳಿಸಿರುವುದು ಖಂಡನೀಯ ಅಂಬೇಡ್ಕರ್ ಅವರು ಎಲ್ಲಾ ಸಮುದಾಯಕ್ಕೆ ನ್ಯಾಯ ಒದಗಿಸಿದ ವ್ಯಕ್ತಿ ಇಂತಹವರಿಗೆ ದೇಶವ್ಯಾಪಿ ಪಟ್ಟಭದ್ರ ಹಿತಾಸಕ್ತಿಗಳು ಪದೇ ಪದೇ ಅಪಮಾನಕ್ಕೀಡು ಮಾಡುತ್ತಿರುವುದು ಅವರ ಅಭಿಮಾನಿಗಳ ಪೂಜ್ಯ ಭಾವನೆಗೆ ದಕ್ಕೆ ಉಂಟುಮಾಡಿದಂತೆ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ವರ್ಗದಮೀಸಲು ಕ್ಷೇತ್ರವಾದ ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಮೀಸಲಾತಿಯಡಿ ಆಯ್ಕೆಯಾದ ಜನಪ್ರತಿನಿಧಿಗಳು ಚಕಾರ ಎತ್ತದೆ ಮೌನವಹಿಸಿರುವುದು ವಿಷಾದನೀಯ ಎಂದರು.
ಡಿಎಸ್‍ಎಸ್ ತಾಲೂಕು ಅಧ್ಯಕ್ಷ ಮಲೆಮಾಚಿಕೆರೆ ಸತೀಶ್ ಮಾತನಾಡಿ,ಬಸವನಕೋಟೆ,ಉಜ್ಜಪವಡೆಯರ ಹಳ್ಳಿ ಸೇರಿದಂತೆ ವಿವಿದೆಡೆ ಕಳೆದ ದಿನಗಳಲ್ಲಿ ಮಹಾನ್ ನಾಯಕರ ಭಾವಚಿತ್ರಕ್ಕೆ ಅವಮಾನಿಸಿದ್ದರೂ ಜಾಗೃತರಾಗದ ಪೊಲೀಸ್ ಇಲಾಖೆ ನಿದ್ರಾವಸ್ಥೆಯಲ್ಲಿರುವುದೆ ಇಂತಹ ಕೃತ್ಯಗಳಿಗೆ ಪುಷ್ಠಿ ನೀಡಿದಂತಾಗುತ್ತದೆ ಕೂಡಲೆ ತಪ್ಪಿಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೆ ಪ್ರಾಥಮಿಕ ಹಂತದಲ್ಲಿ ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದು ಪೊಲೀಸ್ ಇಲಾಖೆಯ ಮೇಲಿನ ಭರವಸೆಯಿಂದ ತಾತ್ಕಾಲಿಕವಾಗಿ ಹೋರಾಟ ಹಿಂಪಡೆಯಲಾಗಿತ್ತು ಆದರೆ ಗಡುವು ನೀಡಿದ ಸಮಯವಾಗುತ್ತಾ ಬಂದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದು ಗುರುವಾರ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಕೀಲ ಹನುಮಂತಪ್ಪ ಮಾತನಾಡಿ,ಘಟನಾವಳಿ ನಡೆದ ಭಾವಚಿತ್ರದಲ್ಲಿ ಸಾಕ್ಷಿ ನಾಶಪಡಿಸಿ ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರ ನಡೆಸಿದ ಪೊಲೀಸ್ ಇಲಾಖೆಯ ನಡೆ ಸರಿಯಲ್ಲ ಪ್ರತಿ ತಿಂಗಳು ಪ.ಜಾತಿ ಮತ್ತು ಪ.ಪಂ ದ ಜಾಗೃತಿ ಸಭೆ ನಡೆಸಿ ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ಪಡೆದ ಎಲ್ಲಾ ಸಮುದಾಯದವರು ಅನ್ಯಾಯ ವಾದಾಗ ದಲಿತರಿಗೆ ಮಾತ್ರ ಹೋರಾಟವನ್ನು ಸೀಮಿತಗೊಳಿಸದೆ ಸರ್ವರೂ ಭಾಗವಹಿಸಿ ಖಂಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಡಿಎಸ್‍ಎಸ್ ಸಂಚಾಲಕ ಹನುಮಂತಪ್ಪ ದಲಿತ ಒಕ್ಕೂಟದ ತಾಲೂಕು ಅಧ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ ಆದಿಜಾಂಭವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಂದ್ರಪ್ಪ ಎಐಎಸ್‍ಎಫ್ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಹೆಚ್‍ಎಂ ಹೊಳೆ ಮುಖಂಡರಾದ ಗೋಡೆ ರಂಗಪ್ಪ ಅಣಬೂರು ರೇಣುಕೇಶ್ ಅಣಬೂರು ರಾಜಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Comment