ಅಂಬೇಡ್ಕರ್ ತತ್ವಾದರ್ಶ ಮಾದರಿ

ರಾಯಚೂರು.ಏ.14- ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ, ಆದರ್ಶಗಳ ಆಧಾರದ ಮೇಲೆ ದಲಿತ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಶಕ್ತಗೊಂಡು ಮುಖ್ಯ ವಾಹಿನಿಗೆ ಬಂದಾಗಲೇ ದೇಶದ ಸಮಗ್ರಾಭಿವೃದ್ಧಿ ಸಾಧ್ಯ ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಾಧ್ಯಾಪಕರಾದ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ ಹೇಳಿದರು.
ಅವರಿಂದು ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ., ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128 ನೇ ಜನ್ಮದಿನಾಚರಣೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. ಇಂದು ಅನೇಕ ಸಂಘಟನೆಗಳು ಅಮಾನವೀಯ ಆಚರಣೆಗೆ ಮುಂದಾಗುತ್ತಿರುವುದು ಆತಂಕದ ವಿಷಯವಾಗಿದೆ. ಎಲ್ಲಾ ಸಂಘಟನೆಗಳು ಒಂದಾಗಿ ಏಕಮುಖವಾಗಿ ಹೋರಾಡಿದರೆ ಮಾತ್ರ ದೇಶ ಬಲಿಷ್ಟಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜನರು ಶಿಕ್ಷಣವನ್ನು ನೌಕರಿಗೋಸ್ಕರ ಶಿಕ್ಷಣ ಪಡೆಯಲು ಜ್ಞಾನಕ್ಕಾಗಿ ಜ್ಞಾನದ ಶಿಕ್ಷಣಗಾಗಿ ಪರಿವರ್ತನೆಯಾಗಬೇಕಾಗಿದೆ. ದೇಶದಲ್ಲಿ ಜಾತಿ ವ್ಯವಸ್ಥೆ ಮಾತ್ರ ಬದಲಾವಣೆಯಾಗುತ್ತಿಲ್ಲ. ಆದರೆ ಬಂಡೆಯಂತೆ ನಿಂತವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಾಗಿದ್ದರು. 12 ನೇ ಶತಮಾನದಲ್ಲಿ ಬಸವಣ್ಣ, 20 ನೇ ಶತಮಾನದಲ್ಲಿ ಅಂಬೇಡ್ಕರ್ ಅವರು ಪುಣ್ಯ ಪುರುಷರ ಕ್ರಾಂತಿಕಾರಿಗಳಾಗಿದ್ದರು. ದೇಶದಲ್ಲಿ ಅಲಿಖಿತ ಸಂವಿಧಾನ ಆಳ್ವಿಕೆ ಮಾಡುತ್ತಿದೆ ಎಂದರು.
ಅಂಬೇಡ್ಕರ್ ಅವರು ಎಲ್ಲದರ ಕುರಿತು ಸಾಮಾಜಿಕ ಜವಾಬ್ದಾರಿಯಿಂದ ಸಂವಿಧಾನವನ್ನು ರಚನೆ ಮಾಡಿದರು. ಬೂಟಾಟಿಕೆ ಸಂವಿಧಾನದಿಂದ ಹಿಂದೆ ಕಲ್ಪನೆಗೆ ಬಾರದ ಕಷ್ಟಗಳಿದ್ದವು. ಅವೆಲ್ಲದರ ಮೇಲೆ ಬೆಳಕು ಚೆಲ್ಲುವ ಕೆಲಸ ಅಂಬೇಡ್ಕರ್ ಅವರು ಮಾಡಿದ್ದರು. ಅವರ ದೃಷ್ಟಿಯಲ್ಲಿ ರಾಷ್ಟ್ರವೆಂದರೆ ಅಧಮ್ಯವಾದ ಚಿಂತನೆ ಮೂಡಿತ್ತು. ಅಸಾಧ್ಯವಾದದ್ದನ್ನು ಮಾಡುವವರನ್ನು ಸಾಧಕರೆಂದು ಕರೆಯಲಾಗುತ್ತದೆ. ತತ್ವ, ಸಿದ್ಧಾಂತ, ಭೌತಿಕ ಅಂಬೇಡ್ಕರ್ ನಮಗೆ ಬೇಕು ಹೊರತು ಆಡಂಬರದ ಅಂಬೇಡ್ಕರ್ ಬೇಡವಾಗಿದೆ. ಅವರು ಕೊಟ್ಟಂತಹ ಶಿಕ್ಷಣ ವ್ಯವಸ್ಥೆ ಚಾರಿತ್ರಿಕವಾಗಿ ಉಳಿದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು, ಬಂತೇಜಿ ಮಹಾಸ್ವಾಮಿಗಳು, ಪೌರಾಯುಕ್ತ ರಮೇಶ ನಾಯಕ ಸೇರಿದಂತೆ ಇನ್ನಿತರ ಸಂಘಟನೆಯ ಮುಖಂಡರಗಳು ಉಪಸ್ಥಿತರಿದ್ದರು.

Leave a Comment