ಅಂಬೇಡ್ಕರ್ ಆಶಯ ನಶಿಸದಂತೆ ಕಾಪಾಡಲು ಕರೆ

ಹಿರಿಯೂರು.ಡಿ.7:ಭಾರತದಲ್ಲಿ ಮೂಲಭೂತ ಅವಶ್ಯಕತೆಗಳಿಲ್ಲದೇ ಬದುಕುತ್ತಿದ್ದ ಬಡಜನರಿಗೂ ಸೇವೆ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಸಿಕೊಟ್ಟ ಮಾನವಾತವಾದಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಭಾಣ ದಿನದಂದು ಅವರ ಆಶಯಗಳನ್ನು ನಶಿಸಿಹೋಗದಂತೆ ಕಾಪಾಡುವ ದೃಡಸಂಕಲ್ಪ ಮಾಡಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನ ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು. ವೇದಾವತಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ನೇತೃತ್ವದಲ್ಲಿ ಗೌತಮ್ ಅಕಾಡೆಮಿ ಶಾಲೆ, ಬಾಪೂಜಿ ನರ್ಸಿಂಗ್ ಕಾಲೇಜು, ಮಾರತಿ, ಎಸ್.ಜಿ.ಆರ್ ಹಾಗೂ ರಮಾಭಾಯಿ ಅಂಬೇಡ್ಕರ್ ಪ್ರೌಢಶಾಲೆಗಳು ಮತ್ತು ಎಸ್.ಆರ್.ಪಿ ಪಿಯು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣದ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣೆಗೆ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಸಂವಿಧಾನವನ್ನು ರಚಿಸಿದ ಆರು ದಶಕಗಳಲ್ಲಿ ಸಂವಿಧಾನ ಪರಿಣ ತರ ವಿವೇಚನೆ ಹಾಗೂ ಕಾನೂನು ತಜ್ಞರಿಂದ ಅವರ ಅವರ ಅಭಿಪ್ರಾಯಕ್ಕೆ ಅನುಗುಣವಾಗಿ ಅರ್ಥೈಸಿ, ಅಂಬೇಡ್ಕರ್ ರಚಿಸಿದಾಗಿನ ಸಂವಿಧಾನದ ಮೂಲ ಅರ್ಥ ಮತ್ತು ಆಶಯಗಳು ನಶಿಸಿ ಹೋಗದಂತೆ ರಕ್ಷಿಸುವ ಅವಶ್ಯಕತೆ ಇದೆ. ಭಾರತವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕøತಿಕವಾಗಿ ಅಭಿವೃದ್ದಿ ಹೊಂದಲು, ಪ್ರಬಲ ರಾಷ್ಟ್ರವನ್ನಾಗಿ ನಿರ್ಮಿಸಲು ಪ್ರತಿಯೊಂದು ಕ್ಷೇತ್ರದಲ್ಲೂ ಯುವಕರು ಮುಂದೆ ಬರಬೇಕು ಎಂದರು.

ಪರಿನಿಬ್ಬಾಣ ದಿನವು ದುಖಃಭರಿತ ದಿನವಾಗಿದ್ದರೂ, ಅವರು ನೀಡಿದ ಜ್ಞಾನದ ಬೆಳಕು ಇಂದು ಭಾರತದ ದಶದಿಕ್ಕಗಳಿಗೂ ಹಬ್ಬಿ, ಅವರು ಹಾಕಿಕೊಟ್ಟ ಮಾರ್ಗದಲ್ಲೇ ಅವರ ಸ್ವಾಭಿಮಾನದ ರಥವನ್ನು ಮುಂದೆಳೆಯಲು ಇಂದು ಕೋಟ್ಯಾಂತರ ಅನುಯಾಯಿಗಳಿದ್ದಾರೆ ಎಂಬುದನ್ನ ಸೂಚಿಸುವುದೇ ಈ ಮೆರವಣೆಗೆ ಉದ್ದೇಶ ಎಂದರು. ಯಾದವ ನೌಕರರ ಸಂಘದ ಅಧ್ಯಕ್ಷ ಹಾಗೂ ಯಳನಾಡು ಕಾಲೇಜಿನ ಉಪನ್ಯಾಸಕ ಎಚ್.ತಿಪ್ಪೇಸ್ವಾಮಿ ಮಾತನಾಡಿ ಅಂಬೇಡ್ಕರ್ ಜೀವನ ಇಂದಿನ ಯುವಕರು ಹಾಗೂ ನಮೆಲ್ಲರಿಗೂ ಆದರ್ಶ. ಅವರ ಪ್ರತಿಪಾದಿಸಿದ ಸಮಾನತೆ, ಮಾನವೀಯತೆ ಮೌಲ್ಯಗಳು, ತತ್ವಗಳು ಹಾಗೂ ಅವರ ಸಿದ್ದಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮೆರವಣೆಗೆ ಜಾಥಾವು ವೇದಾವತಿ ನಗರದ ಕೃಷ್ಣಪ್ಪ ಸರ್ಕಲ್‍ನಿಂದ ಪ್ರಾರಂಭವಾಗಿ ಟಿ.ಬಿ ಸರ್ಕಲ್, ತಾಲೂಕು ಕಛೇರಿ ಮುಂಭಾಗ, ಗಾಂಧಿಸರ್ಕಲ್, ಪ್ರಧಾನರಸ್ತೆಯಲ್ಲಿ ವಿವಿಧ ಮಹಾನ್ ವ್ಯಕ್ತಿಗಳ ಭಾವಚಿತ್ರಗಳೊಂದಿಗೆ ಹಾಗೂ ಅಂಬೇಡ್ಕರ್ ಅವರ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ನಡೆಸಲಾಯಿತು. ನಂತರ ಆಸ್ಪತ್ರೆ ಸರ್ಕಲ್‍ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಪಣೆ ಮಾಡಲಾಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್‍ಜಿಆರ್ ಪೀಠಾಧ್ಯಕ್ಷ ಶ್ರೀಬ್ರಹ್ಮನಂದಾಮುನಿ ಸ್ವಾಮೀಜಿ, ದಲಿತ ಮುಖಂಡರಾದ ಎಂ.ಡಿ.ರವಿ, ವಾರ್ಡ್‍ನ್ ಜಗನ್ನಾಥ್, ಕೆ.ಗಣೇಶ್, ಮಾಜಿ ನಗರಸಭೆ ಸದಸ್ಯರಾದ ಧನಂಜಯ್‍ಕುಮಾರ್, ಪದ್ಮಾನಾಭ, ಯಾದವ ಸಂಘದ ಮಾಜಿ ಅಧ್ಯಕ್ಷ ರಂಗಸ್ವಾಮಿ, ಪ್ರಾಂಶುಪಾಲರಾದ ಮಂಜುನಾಥಶೆಟ್ಟಿ, ನಾಗರಾಜ್, ಧನಂಜಯ್, ಮಂಜುನಾಥ, ಮುಖ್ಯ ಶಿಕ್ಷಕ ಚೇತನ್, ರಮಾಬಾಯಿ ಶಿಕ್ಷಕ ಜಿ.ಪರಮೇಶ್ವರಪ್ಪ, ಮಾರುತಿ ಪ್ರೌಢಶಾಲೆ ಶಿಕ್ಷಕ ಬಿ.ಕೆ.ವೆಂಕಟೇಶ್, ಸಪಪೂ ಕಾಲೇಜು ಪ್ರಾಂಶುಪಾಲ ನಾಗರಾಜ್, ದಾಸಣ್ಣಮಾಳಿಗೆ ಮೂರ್ತಿ, ಬಬ್ಬೂರು ಪರಮೇಶ, ಶಿವುಯಾದವ್, ಉಪನ್ಯಾಸಕರು ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು.

Leave a Comment