ಅಂಬೇಡ್ಕರ್​ಗೆ ಅವಮಾನಿಸಿದ್ದರೆ ನೇಣಿಗೆ ಹಾಕಿ: ಸುರೇಶ್ ಕುಮಾರ್

ಚಾಮರಾಜನಗರ : ಶಿಕ್ಷಣ ಇಲಾಖೆಯ ಕೈಪಿಡಿಯ ಲೋಪದಲ್ಲಿ ತಮ್ಮ ಪಾತ್ರವಿದ್ದರೆ ಸಾರ್ವಜನಿಕವಾಗಿ ತಮ್ಮನ್ನು ನೇಣಿಗೇರಿಸಲಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇಂದು ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಅಂಬೇಡ್ಕರ್ ಬಗ್ಗೆ ಶಿಕ್ಷಣ ಇಲಾಖೆಯಲ್ಲಿ ಆದ ಅಚಾತುರ್ಯದ ಬಗ್ಗೆ ಸ್ಪಷ್ಟನೆ ನೀಡಿದರು. ಅಂಬೇಡ್ಕರ್ ಬಗ್ಗೆ ಅವಮಾನಿಸಿದರೆ ಚಾಮರಾಜನಗರದ ಸರ್ಕಲ್ ನಲ್ಲಿ ನನ್ನನ್ನು ನೇಣಿಗೆ ಹಾಕಿ. ಖಾಸಗಿ ಸಂಸ್ಥೆ, ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಅಚಾತುರ್ಯ ನಡೆದಿದೆ. ಹೀಗಾಗಿ ನಿರ್ದೇಶಕರು ಸೇರಿ ಮೂರು ಮಂದಿಯನ್ನು ಅಮಾನತು ಮಾಡಲಾಗಿದೆ ಎಂದರು.

ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಈಗಾಗಲೇ ಸೂಚಿಸಲಾಗಿದೆ. ನಿರ್ದೇಶಕರು, ಆಯುಕ್ತರ ಗಮನಕ್ಕೆ ತಾರದೆ ಅನುಮೋದನೆ ಪಡೆಯದೇ ಏಕಾಏಕಿ ಕೈಪಿಡಿಯನ್ನು ವೆಬ್‍ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ನಿರ್ದೇಶಕರಿಗೆ ನೀಡಿದ ಸೂಚನೆ ಉಲ್ಲಂಘಿಸಿದ್ದು ಕರ್ತವ್ಯ ಲೋಪವಾಗಿದೆ. ಇದು ನಮ್ಮ ಗಮನಕ್ಕೆ ಬಂದ ಕೂಡಲೇ ವೆಬ್ ಸೈಟ್ ನಿಂದ ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದರು…

Leave a Comment