ಅಂಬಿಗೆ ವಯಸ್ಸಾಯ್ತೋ

ತಮಿಳಿನಲ್ಲಿ ಯಶಸ್ವಿಯಾಗಿದ್ದ ಚಿತ್ರವನ್ನು  ಕನ್ನಡಕ್ಕೆ ತಂದು ಹಿರಿಯ ನಟ ಅಂಬರೀಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ’ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರಕ್ಕೆ ಸುಮಾರು ೭೦ ದಿನಗಳ ಕಾಲ ಚಿತ್ರೀಕರಣ ನಡೆಸಿ ಪೂರ್ಣಗೊಳಿಸಲಾಗಿದೆ ಈ ತಿಂಗಳ ಕೊನೆಯಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ಅರ್ಜುನ್ ಜನ್ಯ ಸಂಗೀತ ನೀಡಿರುವ ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಅವಿಸ್ಮರಣೀಯ ರೀತಿಯಲ್ಲಿ ನಡೆಸಲು ನಿರ್ಮಾಪಕ ಜಾಕ್ ಮಂಜು ತಯಾರಿ ನಡೆಸಿದ್ದಾರೆ. ಪೋಸ್ಟ್  ಪ್ರೊಡಕ್ಷನ್ ಹಂತದಲ್ಲಿ ಇರುವ ಕಾರಣ ಪ್ರಚಾರದ ಸಲುವಾಗಿ ಮೊದಲಬಾರಿ ತಂಡವು ಕಳೆದ ಮಂಗಳವಾರ ಸಿನಿಮಾದ ಪತ್ರಿಕಾಗೋಷ್ಠಿ ನಡೆಸಿ ಹಲವು  ವಿಷಯಗಳನ್ನು ಹಂಚಿಕೊಂಡಿತು.

ambi_111ಸ್ವಾತಿಮುತ್ತು ಚಿತ್ರದಿಂದ ಸುದೀಪ್‌ರಿಂದ ಚಿತ್ರರಂಗದ ವಿಭಾಗಗಳನ್ನು ಅರಿತು  ಐದು ಚಿತ್ರಗಳನ್ನು ನಿರ್ಮಾಣ ಮಾಡಲಾಯಿತು. ಅವರೇ ಕರೆದು ಅಂಬಿ ನಿಂಗ್ ವಯಸ್ಸಾಯ್ತೋ’ ನಿರ್ಮಿಸಲು  ಹೇಳಿದ್ದು  ಅಮೃತಕ್ಕಿಂತ ಹೆಚ್ಚು ಎನ್ನಬಹುದು. ಸುದೀಪ್ ಪಾತ್ರದಲ್ಲಿ ತಲ್ಲೀನರಾಗಿ ೨೩ ದಿವಸ ತಂಡದೊಂದಿಗೆ ಇದ್ದರು.

ಇದೇ ತಿಂಗಳು ಕೊನೆವಾರದಂದು  ಬಿಡುಗಡೆ ಮಾಡಲು ತಯಾರಿ  ನಡೆಸಲಾಗಿದೆ. ಬೆಂಗಳೂರು, ಕೇರಳ, ಊಟಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ಮಾಪಕ ಜಾಕ್‌ಮಂಜು ಮಾಹಿತಿ ನೀಡಿದರು.

ಮೈಕ್ ತೆಗೆದುಕೊಂಡ ನಿರ್ದೇಶಕ ೨೬ರ ಹರೆಯ ಗುರುದತ್‌ಗಾಣಿಗ ಕುಂದಾಪುರದಿಂದ ಬಂದು ಸುದೀಪ್ ಅವರಲ್ಲಿ ಕೆಲಸ ಕಲಿತೆ. ಅವರು ದೊಡ್ಡ ಚಿತ್ರಕ್ಕೆ ನಿರ್ದೇಶನ  ಮಾಡಲು ಅವಕಾಶ ನೀಡಿದ್ದಾರೆ. ಮೂಲ ಕತೆಗಿಂತ ಪ್ರಮುಖ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಕುತೂಹಲ ಮೂಡಸಲಿದೆ ಚಿತ್ರವು ಅತ್ಯುತ್ತಮವಾಗಿ ಮೂಡಿಬಂದಿದೆ ಎನ್ನುತ್ತಾರೆ.

ambi_157೨೨ ವರ್ಷಗಳ ಹಿಂದೆ ಇದೇ ಹಾಲ್‌ನಲ್ಲಿ ಬ್ರಹ್ಮ ಚಿತ್ರದ ಗೋಷ್ಟಿ ನಡೆದಿತ್ತು. ಕಾಕತಾಳೀಯ ಎಂಬಂತೆ ಅದೇ ಜಾಗದಲ್ಲಿ ಸೇರಿದ್ದೇವೆ. ಅಂಬಿ ಮಾಮ ಆರೋಗ್ಯದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಶೂಟಿಂಗ್ ಮುಗಿಸಲಾಗಿದೆ. ಅವರು  ಕ್ಯಾಮಾರ ಮುಂದೆ ನಿಂತರೆ ನಟನಾಗುತ್ತಿದ್ದರು. ಅಂಬಿ ಮಾಮ ಚಿಕ್ಕವರಿದ್ದಾಗ ಪ್ರೀತಿ ಕಂತುಗಳಲ್ಲಿ ಕಾಣಿಸಿಕೊಂಡಿದ್ದು, ೩೫ ನಿಮಿಷ ಬರಲಿದೆ. ಜೋಡಿಯಾಗಿ ಶೃತಿಹರಿಹರನ್ ಇದ್ದಾರೆ. ಹಾಗಂತ ಅವರನ್ನು ಅನುಕರಿಸಿಲ್ಲ. ಸುಹಾಸಿನಿ ಮೇಡಂ ಅಭಿನಯ ಸೂಪರ್.  ಅರ್ಜುನ್‌ಜನ್ಯಾ  ಒಳ್ಳೆ ಹಾಡುಗಳನ್ನು  ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅವರಿಗೆ ಏನು ಸಲ್ಲಬೇಕೋ ಅದನ್ನು ನೀಡಲಾಗಿದೆ ಎಂದರು ಸುದೀಪ್.

ಕೊನೆಯಲ್ಲಿ ಮಾತನಾಡಿದ  ಅಂಬರೀಷ್.  ಹಳಬರು, ಹೊಸಬರು ಇದ್ದಾರೆ. ದಿಲೀಪ್ ಮಗನಾಗಿ ನಟಿಸಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಸಿನಿಮಾ ಮಾಡುವುದು ಕಷ್ಟ.  ಸುದೀಪ್‌ಗೆ ಚಿಕ್ಕ ವಯಸ್ಸಿನಿಂದ ನಟನಾಗುವ ಆಸೆ ಇತ್ತು. ಕಾರಣಾಂತರದಿಂದ ಎರಡು ಚಿತ್ರಗಳು ನಿಂತು ಹೋದವು. ಸ್ಪರ್ಶ ಮೂಲಕ ಜನರಿಗೆ ಪರಿಚಿತರಾದರು. ನನ್ನ ವಯಸ್ಸಿಗೆ ತಕ್ಕಂತೆ ಪಾತ್ರ ನೀಡಿದ್ದಾರೆ. ನಿರ್ಮಾಪಕರ ನಟನಾಗಿರುವುದರಿಂದ ಇಷ್ಟ ವರ್ಷ ಇರಲು ಸಾದ್ಯವಾಯಿತು. ೫೦೦ ರೂ.ಗೆ ಖಳನಾಯಕನಾಗಿ ಅಭಿನಯಿಸಿ, ಮುಂದೆ ಪೋಷಕನಟ,ನಾಯಕ, ಜನನಾಯಕನಾಗಿ ನಿಮ್ಮ ಮುಂದೆ ಇದ್ದೇನೆ. ನೀವುಗಳು ಸಿನಿಮಾ ನೋಡಿ ನನಗೆ ವಯಸ್ಸಾಯ್ತಾ ಅಂತ ಹೇಳುಬೇಕು ಎಂದು ನಕ್ಕರು.

Leave a Comment