ಅಂಬಾನಿ ಸ್ಕೂಲ್ ಶ್ರೀಮಂತ ಮಕ್ಕಳಿಗೆ ಮಾತ್ರ ಪ್ರವೇಶ

ಮುಂಬೈ, ಜ. ೧೧- ೨೧ನೇ ಶತಮಾನದಲ್ಲಿ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಪಾಲಕರು ರಾಜಿಯಾಗೋದಿಲ್ಲ. ಅದಕ್ಕೆ ಎಷ್ಟೇ ಖರ್ಚಾ ಆಗಲಿ ಕಷ್ಟಪಟ್ಟು ಹಣ ಹೊಂದಿಸುತ್ತಾರೆ. ಬಡವರು ಕೂಡ ತಮ್ಮ ಮಕ್ಕಳು ಉನ್ನತ ಶಾಲೆಯಲ್ಲಿ ಕಲಿಯಲಿ ಎಂದು ಕನಸು ಕಾಣ್ತಾರೆ. ಆದರೆ ಕೆಲವೊಂದು ಶಾಲೆ ಬಗ್ಗೆ ಪಾಲಕರು ಕೇಳಬಹುದೇ ಹೊರತು ಮಕ್ಕಳನ್ನು ಆ ಶಾಲೆಗೆ ಸೇರಿಸಲು ಸಾಧ್ಯವಿಲ್ಲ.
ಮುಖೇಶ್ ಅಂಬಾನಿ ಮುಂಬೈನಲ್ಲಿ ತೆರೆದಿರುವ ಧೀರೂಭಾಯಿ ಅಂಬಾನಿ ಸ್ಕೂಲ್ ಕೂಡ ಇದರಲ್ಲಿ ಒಂದು. ಧೀರೂಭಾಯಿ ಅಂಬಾನಿ ಸ್ಕೂಲು ಬಾಲಿವುಡ್ ಮಂದಿಯನ್ನು ಆಕರ್ಷಿಸುತ್ತದೆ. ಬಹುತೇಕ ಬಾಲಿವುಡ್ ಸೆಲೆಬ್ರಿಟಿ ಮಕ್ಕಳು ಈ ಸ್ಕೂಲಿನಲ್ಲಿ ಕಲಿತಿದ್ದಾರೆ ಹಾಗೇ ಕಲಿಯುತ್ತಿದ್ದಾರೆ.
ಶಾಲೆಗಳ ಪಟ್ಟಿಯಲ್ಲಿ ಧೀರೂಭಾಯಿ ಅಂಬಾನಿ ಶಾಲೆ ಅಗ್ರ ಸ್ಥಾನದಲ್ಲಿದೆ. ಹಾಗೆ ಶುಲ್ಕ ವಿಚಾರದಲ್ಲಿಯೂ ಈ ಶಾಲೆ ಮುಂದಿದೆ. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್ ಅಧ್ಯಕ್ಷರು ಮುಖೇಶ್ ಅಂಬಾನಿ ಪತ್ನಿ ನೀತೂ ಅಂಬಾನಿ. ಅವರ ಸಹೋದರಿ ಮಮತಾ ಇದೇ ಶಾಲೆಯಲ್ಲಿ ಶಿಕ್ಷಕಿ. ಆರಂಭದಲ್ಲಿ ಇದು ಯಶಸ್ವಿಯಾಗುತ್ತಾ ಇಲ್ವಾ ಎಂಬ ಭಯ ನೀತಾರನ್ನು ಕಾಡಿತ್ತಂತೆ. ಆದ್ರೀಗ ಎಡ್ಮಿಷನ್ ವೇಳೆ ನೀತಾ ಅಂಬಾನಿ ಫೋನ್ ಸ್ವಿಚ್ ಆಫ್ ಮಾಡಿಕೊಳ್ತಾರಂತೆ.
ಏಳು ಅಂತಸ್ಥಿನ ಈ ಸ್ಕೂಲಿನಲ್ಲಿ, ಎಲ್ ಕೆಜಿಯಿಂದ ೮ನೇ ತರಗತಿಯವರೆಗೆ ಒಂದು ಲಕ್ಷದ ೭೦ ಸಾವಿರ ರೂಪಾಯಿ ಶುಲ್ಕ ಪಡೆಯಲಾಗುತ್ತದೆ. ೮ನೇ ತರಗತಿಯಿಂದ ೧೦ನೇ ತರಗತಿಯವರೆಗೆ ೧ ಲಕ್ಷ ೮೫ ಸಾವಿರ ರೂಪಾಯಿ ಶುಲ್ಕ ನಿಗಧಿಯಾಗಿದೆ. ೮ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಐಸಿಎಸ್ ಇಯಲ್ಲಿ ಓದುವ ವಿದ್ಯಾರ್ಥಿಗಳು ೪ ಲಕ್ಷದ ೪೮ ಸಾವಿರ ರೂಪಾಯಿ ನೀಡಬೇಕು. ಧೀರೂಭಾಯಿ ಅಂಬಾನಿ ಶಾಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಗ್ರ ೧೦ ಸ್ಕೂಲುಗಳಲ್ಲಿ ಒಂದಾಗಿದೆ. ಈ ಶಾಲೆಯಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಆದರೆ ಸಾಮ್ಯಾನರಿಗೆ ಇಂತಹ ಶಾಲೆಯಲ್ಲಿ ಓದುವುದು ಇನ್ನು ಕಾಣಸಾಗಿದೆ.

Leave a Comment