ಅಂಫಾನ್ ಪೀಡಿತ ಪಶ್ಚಿಮ ಬಂಗಾಳಕ್ಕೆ ಒಂದು ಸಾವಿರ ಕೋಟಿ ಸಹಾಯಧನ ಘೋಷಿಸಿದ ಕೇಂದ್ರ

ಕೋಲ್ಕತಾ, ಮೇ 22 -ಅಂಫಾನ್ ಚಂಡಮಾರುತಕ್ಕೆ ನಲುಗಿರುವ ಪಶ್ಚಿಮಬಂಗಾಳಕ್ಕೆ ಕೇಂದ್ರ ಸರ್ಕಾರ ಒಂದು ಸಾವಿರ ಕೋಟಿ ಪರಿಹಾರ ಧನ ಘೋಷಿಸಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಡನೆ ಅಂಫಾನ್ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನ ನರೇಂದ್ರ ಮೋದಿ, ತತ್‍ಕ್ಷಣದ ಪರಿಹಾರಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧಂಕರ್ ಮತ್ತು ಇತರ ರಾಜ್ಯ ಅಧಿಕಾರಿಗಳೊಂದಿಗೆ ಬಸಿರ್ಹತ್‌ನಲ್ಲಿ ನಡೆದ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ”ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಜನರೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಂತಿವೆ. ”
”ಮೇ ತಿಂಗಳಲ್ಲಿ, ದೇಶವು ಚುನಾವಣೆಗಳಲ್ಲಿ ನಿರತವಾಗಿತ್ತು ಮತ್ತು ಆ ಸಮಯದಲ್ಲಿ ನಾವು ಒಡಿಶಾದಲ್ಲಿ ಚಂಡಮಾರುತವನ್ನು ಎದುರಿಸಬೇಕಾಯಿತು. ಈಗ, ಒಂದು ವರ್ಷದ ನಂತರ, ಈ ಚಂಡಮಾರುತವು ನಮ್ಮ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಪಶ್ಚಿಮ ಬಂಗಾಳದ ಜನರು ಇದರಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ, ”ಎಂದು ಮೋದಿ ಹೇಳಿದ್ದಾರೆ

Leave a Comment