ಅಂಪೈರ್‌ನನ್ನು ’ಕಳ್ಳ’ ಎಂದ ಸರೇನಾಗೆ ಅಮೆರಿಕ ಓಪನ್ ಸೋಲು

ನ್ಯೂಯಾರ್ಕ್, ಸೆ ೯-ವಿಶ್ವದ ನಂ ಒನ್ ಟೆನ್ನಿಸ್ ಆಟಗಾರ್ತಿ ಸರೀನ ವಿಲಿಯಮ್ಸ್ ಅಂಪೈರ್ ವಿರುದ್ಧವೆ ಸಿಡಿದೆದ್ದ ಪರಿಣಾಮ ಇದೆ ಮೊದಲ ಬಾರಿಗೆ ಜಪಾನಿನ ನವೋಮಿ ಓಸಾಕಾ ಪ್ರತಿಷ್ಠಿತ ಅಮೆರಿಕ ಓಪನ್  ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನಿನ್ನೆ ನಡೆದ ಫೈನಲ್ ಪಂದ್ಯದ ವೇಳೆ ನಾಟಕೀಯ ವಿದ್ಯಮಾನಕ್ಕೂ  ಸಾಕ್ಚಿಯಾಯಿತು. ಸಿಟ್ಟಿನ ಭರದಲ್ಲಿ ಸರೀನಾ ಅಂಪೈರ್‌ನನ್ನೇ  ’ನೀನು ಕಳ’ ಎಂದು ಜರಿದರು.
೨೦ ವರ್ಷದ ಓಸಾಕ,ಸರೇನಾ ಅವರನ್ನು  ೬-೨ ೬-೪ ಸೆಟ್ ಗಳಿಂದ ಪರಾಭವಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.   ಹೆಣ್ಣುಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಪ್ರಶಸ್ತಿ  ಸರೇನಾ ಕನಸು ಭಗ್ನಗೊಂಡಿತು.
೨೩ ಗ್ರ್ಯಾಂಡ ಸ್ಲ್ಯಾಮ್ ಪ್ರಶಸ್ತಿಗಳನ್ನು ಗದ್ದು ದಾಖಲೆ ಇರುವ ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಮುರಿಯವ ಅವಕಾಶವನ್ನು ಸರೇನಾ  ಕೈಚೆಲ್ಲಿದರು.
ಫೈನಲ್ ಪಂದ್ಯದ ವೇಳೆ ಸರೆನಾ ವಿಲಿಯಮ್ಸ್ ಆಟದ ನಿಯಮಗಳನ್ನು ಗಾಳಿಗೆ ತೂರಿದ್ದು ಪ್ರಮುಖ ಕಾರಣವಾಯಿತು. ಆಟದ ಸಂದರ್ಭದಲ್ಲಿ ಗ್ಯಾಲರಿಯಲ್ಲಿ ಕುಳಿತಿದ್ದ ತರಬೇತುದಾರರಿಂದ ಸಲಹೆ ಪಡೆದಾಗ ಅಂಪೈರ್ ಎಚ್ಚರಿಕೆ ನೀಡಿದರು. ಆದರೆ ಸರೇನಾಳ ಉದ್ಧಟತನ ಅಷ್ಟಕ್ಕೆ ಸೀಮಿತವಾಗಲಿಲ್ಲ. ರೊಚ್ಚಿಗೆದ್ದ ಸೆರೆನಾ ಟೆನಿಸ್ ರಾಕೆಟ್ ಮುರಿದಿದ್ದರಿಂದ ಅಂಪೈರ್ ಒಂದು ಪಾಯಿಂಟ್ ಕಡಿತಗೊಳಿಸಿದರು. ಈ ವೇಳೆ ಅಂಪೈರ್ ಜೊತೆಗೂ ವಾಗ್ವಾದಕ್ಕಿಳಿದು ಅಂಪೈರ್‌ನನ್ನು ಕಳ್ಳ ಎಂದು ಬೈಗುಳದ ಮಾತುಗಳನ್ನಾಡಿ  ಈ ಬಗ್ಗೆ ಕ್ಷಮೆ ಕೇಳಬೇಕೆಂದು ಪಟ್ಟುಹಿಡಿದರು. ನೀವು ನನ್ನನ್ನು ತೇಜೋವಧೆ ಮಾಡುತ್ತಿದ್ದೀರಾ ಎಂದು ಈ ಮೂಲಕ ಅವಾಚ್ಯ ಶಬ್ದಗಳಿಂದ ಮೂರನೆ ನಿಯಮವನ್ನು  ಉಲ್ಲಂಘಿಸಿದ್ದಕ್ಕಾಗಿ  ಎರಡನೇ ಸೆಟ್‌ನಲ್ಲಿ  ಒಸಕಾಗೆ ಒಂದು ಗೇಮ್ ದಂಡ ವಿಧಿಸಿದ್ದರಿಂದ  ಅಂಕ ನೀಡಿದ್ದರಿಂದ ೫-೩ ರರಿಂದ ಮುನ್ನಡೆ ಸಾಧಿಸಿದರು.
ಇದಾದ ನಂತರ ಸರೇನಾ ಮುಂದಿನ ಅಂಕವನ್ನು ಗೆದ್ದುಕೊಂಡರು.
ಈ ಪರಿಸ್ಥಿತಿಯ ಲಾಭ ಪಡೆದ ಓಸಾಕ ಅದ್ಭುತ ಆಟ ಪ್ರದರ್ಶಿಸುವ ಮೂಲಕ ತಮ್ಮ ದೇಶಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಸರೇನಾನ, ತಾವು ಯಾವುದೇ ರೀತಿಯ ಮೋಸ ಮಾಡಿಲ್ಲ. ಪಂದ್ಯದ ವೇಳೆ ತಾವು ತಮ್ಮ ತರಬೇತುದಾರರಿಂ ಯಾವುದೆ ಸಲಹೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಒಸಾಕಳನ್ನು ಅಭಿನಂದಿಸಿದರು.  ಒಟ್ಟಾರೆ  ಅಮೆರಿಕ ಮುಕ್ತ ಟೆನ್ನಿಸ್‌ನ  ಫೈನಲ್ ಪಂದ್ಯ ನಾಟಕೀಯ ವಿದ್ಯಮಾನಗಳಿಗೆ ಸಾಕ್ಚಿಯಾಯಿತು. ಮತ್ತೊಂದೆಡೆ ಜಪಾನಿನ ಒಸಾಕ ಪ್ರತಿಷ್ಠಿತ ಪ್ರಶಸ್ತಿಯನ್ನು  ಗೆದ್ದು ಬೀಗಿದರು.

Leave a Comment