ಅಂಧನ ಚೆಂದದ ಪ್ರೇಮಕಥೆ ‘ಕೃಷ್ಣ ತುಳಸಿ’

ಅಂಧನ ಪ್ರೇಮಕತೆಯನ್ನು ಚೆಂದವಾಗಿ ಹಣೆದಿರುವ ನಿರ್ದೇಶಕ ಸುಕೇಶ್ ನಾಯಕ್ ಅದಕ್ಕೆ ‘ಕೃಷ್ಣತುಳಸಿ’ ಎನ್ನುವ ಹೆಸರಿಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಸ್ತು ವಿಭಾಗದಲ್ಲಿ ಪ್ರೋಪೆಸರ್ ಆಗಿರುವ ನಾಯಕ, ಕೃಷ್ಣ ಹುಟ್ಟು ಕುರುಡ ಆತನ ಪ್ರೀತಿ ನಾಯಕಿಯಾಗಿರವ ತುಳಸಿಯೊಂದಿಗೆ ಬೆಸೆಯುವ ಕಥಾ ಎಳೆಯನ್ನಿಟ್ಟುಕೊಂಡು ಚಿತ್ರವನ್ನು ಶೇ.೮೫ರಷ್ಟು ಮುಗಿಸಿದ್ದಾರೆ.

ಮೈಸೂರು, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದ್ದು, ಮೂರು ಹಾಡುಗಳ ಚಿತ್ರೀಕರಣವನ್ನು ಮೈಸೂರಿನಲ್ಲೇ ನಡೆಸಲಾಗಿದೆ. ಇಲ್ಲಿಯವರೆಗೆ ಚಿತ್ರೀಕರಿಸಿವುದರ ಸಂಕಲನದ ಕೆಲಸ ಮುಗಿಸಲಾಗಿದ್ದು ಎಪ್ರಿಲ್ ಕೊನೆ ಇಲ್ಲವೇ ಮೇ ಮೊದಲ ವಾರದಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸುಕೇಶ್ ಚಿತ್ರದ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡರು.

ಅಂಧ ಎಂದ ಮಾತ್ರಕ್ಕೆ ಆತನಿಗೆ ಕನಿಕರ ಬೇಡ ಟಿಪ್‌ಟಾಪ್ ಆಗಿ ಎಲ್ಲರಂತೆ ಇರುತ್ತಾನೆ. ಆತ ಉತ್ತಮ ಗೈಡ್ ಕೂಡ ಇಲ್ಲಿಯವರೆಗೆ ಅಂಧನ ಪ್ರೇಮಕತೆಗಳು ಬಂದಿರಬಹುದು ಅದಕ್ಕಿಂತ ಇದು ಭಿನ್ನವಾಗಿದ್ದು, ಇದು ಕಾಲ್ಪನಿಕ ಕತೆಯನ್ನೊಳಗೊಂಡ ಚಿತ್ರವಾಗಿದೆ ಎನ್ನುತ್ತಾರೆ.

ಹತ್ತು ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದ ಅನುಭವ ಪಡೆದಿರುವ ಸುಕೇಶ್ ನಾಗತಿಹಳ್ಳಿ ಚಂದ್ರಶೇಖರ್ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ ಎರಡು ವರ್ಷಗಳ ಹಿಂದೆ ಹೊಳೆದ ಕತೆಯನ್ನು ನಿರ್ಮಾಪಕರಿಗೆ ಹೇಳಿದ ತಕ್ಷಣ ಅವರು ಚಿತ್ರ ಮಾಡಲು ಮುಂದಾದರು ಎಂದರು. ದೇವನಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿ ಎಂ.ನಾರಯಣಸ್ವಾಮಿ ಕೃಷ್ಣತುಳಸಿ ನಿರ್ಮಿಸುತ್ತಿದ್ದಾರೆ.

ನಾಯಕ ಸಂಚಾರಿ ವಿಜಯ್ ಇದೊಂದು ನವಿರಾದ ಪ್ರೇಮ ಕಥೆ ಚಿತ್ರ. ಕುರುಡನಾಗಿ ಈ ಹಿಂದೆ ನಟಿಸಿರುವುದಕ್ಕಿಂದ ಇದರಲ್ಲಿ ಭಿನ್ನವಾಗಿದೆ ನನಗೆ ಖುಷಿ ಕೊಟ್ಟಿರುವ ಪಾತ್ರ ಜನರಿಗ ಇಷ್ಟವಾಗುತ್ತದೆ ಎಂದರು. ನಾಯಕಿ ಮೇಘನಾಶ್ರೀ ಇದು ತಮಗೆ ಮೊದಲ ಚಿತ್ರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎನ್ನುವ ಖುಷಿಯನ್ನು ಹಂಚಿಕೊಂಡರು.

Leave a Comment