ಅಂದು ದೇಶಕ್ಕೆ ಒಂದೇ ಪ್ರಯೋಗಾಲಯ ಇಂದು 612 ಲ್ಯಾಬ್ ಗಳು; ಐಸಿಎಂಆರ್ ನಿರ್ದೇಶಕ ಭಾರ್ಗವ

ನವದೆಹಲಿ, ಮೇ ೨೬- ಎರಡು ತಿಂಗಳ ಹಿಂದೆ ಕೊರೊನಾ ಪರೀಕ್ಷೆ ನಡೆಸಲು ಭಾರತದಲ್ಲಿ ಪುಣೆಯ ರಾಷ್ಟ್ರೀಯ ವೈರಾಣು ಪ್ರಯೋಗಾಲಯ ಮಾತ್ರ ಇತ್ತು ಆದರೆ, ಇಂದು ದೇಶಾದ್ಯಂತ ಇಂತಹ 612 ಪ್ರಯೋಗಾಲಯಗಳನ್ನು ಹೊಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಹೇಳಿದೆ.
ಕೊರೊನಾ ಪರೀಕ್ಷೆಗಳನ್ನು ನಡೆಸಲು ಮೂರು ತಿಂಗಳ ಹಿಂದೆ ಇಡೀ ದೇಶ ಪುಣೆಯ ಪ್ರಯೋಗಾಲಯವನ್ನೇ ಅವಲಂಭಿಸಬೇಕಾಗಿತ್ತು. ಆದರೆ, ಇಂದು ದೇಶದಲ್ಲಿ ಒಟ್ಟು 612 ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದೆ ಎಂದು ಐಸಿಎಂ ಆರ್ ನಿರ್ದೇಶಕ ಡಾ|| ಬಲರಾಂ ಭಾರ್ಗವ ದೆಹಲಿಯಲ್ಲಿ ತಿಳಿಸಿದ್ದಾರೆ
ಈ ಪೈಕಿ 430 ಸರ್ಕಾರಿ ಪ್ರಯೋಗಾಲಯಗಳಾಗಿದ್ದು, ಉಳಿದ 182 ಖಾಸಗಿ ವಲಯದ ಪ್ರಯೋಗಾಲಗಳಾಗಿವೆ. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಭಾರತ ಮೂರು ತಿಂಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ವಿವರಿಸಿದ್ದಾರೆ. ದೇಶ ಇಂದು ಪ್ರತಿದಿನ 1ಲಕ್ಷದ 10ಸಾವಿರ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ

ದೇಶದಲ್ಲಿ ಪ್ರಸ್ತುತ ಒಂದುವರೆ ಲಕ್ಷಮಂದಿಗೆ ಕೊರೊನಾ ಸೋಂಕು ತಗುಲಿದೆ. 60 ಸಾವಿರಕ್ಕೂ ಹೆಚ್ಚುಮಂದಿ ಚೇತರಿಸಿಕೊಂಡಿದ್ದಾರೆ.  4, 162 ಮಂದಿ ಮೃತಪಟ್ಟಿದ್ದಾರೆ.

Share

Leave a Comment