ಅಂತರ ಕಾಯ್ದುಕೊಂಡು ತರಕಾರಿ ಖರೀದಿಸಲು ಅವಕಾಶ

ಸೇಡಂ,ಮಾ.26-ತರಕಾರಿ ಖರೀದಿ ವೇಳೆ ನೂಕು ನುಗ್ಗಲು ಆಗದಂತೆ ತಪ್ಪಿಸಲು ಗ್ರಾಹಕರ ಮಧ್ಯೆ ನಿಗದಿತ ಅಂತರ ಕಾಯ್ದುಕೊಳ್ಳಲು ಗುರುತು ಹಾಕುವುದರ ಮೂಲಕ ತರಕಾರಿ ಖರೀದಿಗೆ ಪಟ್ಟಣದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸೇಡಂ ಸಿಪಿಐ ರಾಜಶೇಖರ್ ಹಳಿಗೋದಿ, ಪಿಎಸ್ಐ ಸುಶೀಲ್ ಕುಮಾರ್ ಹಾಗೂ ಸಿಬ್ಬಂದಿ ಬೆಳಗ್ಗೆ ೫:೪೫ ರಿಂದ ಬಸ್ ನಿಲ್ದಾಣದಲ್ಲಿ ತರಕಾರಿ‌ ಖರೀದಿಸಲು ಜನರು ಮುಗಿಬೀಳದಂತೆ ತಡೆಯಲು ತರಕಾರಿ ಅಂಗಡಿಗಳ ಮುಂದೆ ಮಾರ್ಕ್ ಮಾಡುವುದರ ಮೂಲಕ ನಿಗದಿತ ಅಂತರ ಕಾಯ್ದುಕೊಂಡು ತರಕಾರಿ ಖರೀದಿಸಲು ಅನುವು ಮಾಡಿಕೊಟ್ಟರು.

ತರಕಾರಿ ಖರೀದಿಗೆ ಬಂದಿದ್ದವರು ನಿಗದಿತ ಅಂತರ ಕಾಯ್ದುಕೊಂಡು ತರಕಾರಿ ಖರೀದಿಸಿ ತಮ್ಮತಮ್ಮ ಮನೆಗಳಿಗೆ ತೆರಳಿದರು. ಇದೇ ರೀತಿ ಜನ ಅಂತರ ಕಾಯ್ದುಕೊಂಡು ತರಕಾರಿ, ದಿನಸಿ ಸಾಮಾನು ಖರೀದಿಸಿದರೆ ಯಾರಿಗೂ ತೊಂದರೆಯಾಗುವುದಿಲ್ಲ, ಇದೇ ನಿಮಯವನ್ನು ಪಾಲಿಸುವುದರ ಮೂಲಕ ಕೊರೊನಾ ಸೋಂಕು ಹರಡದಂತೆ ತಡೆಯಲು ಎಲ್ಲರು ಪ್ರಯತ್ನ ಮಾಡಬೇಕು ಎಂದು ಸಿಪಿಐ ಹಳಿಗೋದಿ ಮನವಿ ಮಾಡಿದರು..

Leave a Comment