ಅಂತರ ಕಾಯ್ದಕೊಂಡ ಸಿಎಂ

ಬೆಂಗಳೂರು, ಮಾ. ೨೬- ಕೊರೊನಾ ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಮದ್ದು ಎಂದು ಪ್ರಧಾನಿ ನರೇಂದ್ರಮೋದಿ ಅವರು ಹೇಳಿದ ಬೆನ್ನಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಧ್ಯತೆ ನೀಡಿದ್ದು, ಸಚಿವರೂ, ಶಾಸಕರೂ ಸೇರಿದಂತೆ ಯಾರು ತಮ್ಮನ್ನು ಭೇಟಿಯಾಗದಂತೆ ಸೂಚನೆ ನೀಡಿದ್ದಾರೆ.
ಯಾವುದೇ ಸಚಿವರು ಶಾಸಕರು ಹೊಸ ವರ್ಷ ಯುಗಾದಿಯ ಶುಭಾಶಯ ಹೇಳಲು, ತಮ್ಮನ್ನು ಭೇಟಿ ಮಾಡುವ ಅಗತ್ಯವಿಲ್ಲ, ನೀವಿರುವ ಊರು, ಸ್ಥಳದಲ್ಲೇ ಕೆಲಸ ಮಾಡಿ, ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಎಲ್ಲ ಸಚಿವರಿಗೂ ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಮನೆಯಲ್ಲೇ ಉಳಿದ ಸಿಎಂ
ಕೊರೊನಾ ಸೋಂಕು ತಡೆಯಲು ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆಯಿಂದಲೇ ಮನೆಯಲ್ಲೇ ಉಳಿದಿದ್ದು, ಇಂದೂ ಸಹ ಡಾಲಱ್ಸ್ ಕಾಲೋನಿಯ ತಮ್ಮ ಮನೆಯಲ್ಲೇ ಇದ್ದಾರೆ. ಮನೆಯಲ್ಲೇ ಉಳಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಇವರುಗಳಿಂದ ಕೊರೊನಾ ನಿಯಂತ್ರಣದ ಬಗ್ಗೆ ಕೊರೊನಾ ಟಾಸ್ಕ್‌ಫೋರ್ಸ್‌ನ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದು ತಕ್ಷಣಕ್ಕೆ ಕೈಗೊಳ್ಳಬೇಕಾಗಿರುವ ಕೆಲ ಕ್ರಮಗಳ ಬಗ್ಗೆಯೂ ಸೂಚನೆ ನೀಡಿದ್ದಾರೆ.

Leave a Comment