ಅಂಡರ್ 19 ಕ್ರಿಕೆಟ್ ವರ್ಲ್ಡ್ ಕಪ್ ತಂಡ : ಜಿಲ್ಲೆಯ ಯುವಕನಿಗೆ ಸ್ಥಾನ

ರಾಯಚೂರು.ಡಿ.03- ಭಾರತದ ಅಂಡರ್ 19 ಕ್ರಿಕೆಟ್ ವರ್ಲ್ಡ್ ಕಪ್ ತಂಡಕ್ಕೆ ರಾಯಚೂರು ಜಿಲ್ಲೆಯ ಯುವಕ ಆಯ್ಕೆಯಾಗಿದ್ದಾನೆ.
ರಾಯಚೂರಿನ ವಿದ್ಯಾಧರ ಪಾಟೀಲ್ ಎನ್ನುವ ಯುವಕನು ಭಾರತದ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ. ಬಿಸಿಸಿಐ ಬಿಡುಗಡೆಗೊಳಿಸಿದ 14 ಜನರ ತಂಡದಲ್ಲಿ ವಿದ್ಯಾಧರ ಪಾಟೀಲ್ ಸ್ಥಾನ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಈ ಹಿಂದೆ ಜಿಲ್ಲೆಯ ಯರ್ರೇಗೌಡ ಎಂಬುವವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗಿದ್ದರು. ಚಿಕ್ಕಸೂಗೂರು ಗ್ರಾಮದ ನಿವಾಸಿಯಾದ ವಿದ್ಯಾಧರ ಪಾಟೀಲ್, ಜಲ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೋಮಶೇಖರ ಎನ್ನುವವರ ಪುತ್ರನಾಗಿದ್ದಾನೆ.
ಕ್ರಿಕೆಟ್‌ನಲ್ಲಿ ಅತ್ಯಂತ ಆಸಕ್ತರಾದ ಇವರು ಪರಿಶ್ರಮದ ಮೂಲಕ ಭಾರತೀಯ ತಂಡವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಭಾರತೀಯ ಅಂಡರ್ 19 ತಂಡದಲ್ಲಿ ಪ್ರತಿನಿಧಿಸುವ ಈ ಅವಕಾಶ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಜ.17 ರಿಂದ ಫೆ.9 ರವರೆಗೆ ದಕ್ಷಿಣ ಆಫ್ರೀಕಾದಲ್ಲಿ ನಡೆಯಲಿರುವ ಅಂಡರ್ 19 ವರ್ಲ್ಡ್ ಪಂದ್ಯಾವಳಿಯಲ್ಲಿ ಇವರು ಪ್ರತಿನಿಧಿಸಲಿದ್ದಾರೆ. 10ನೇ ತರಗತಿಯಲ್ಲಿಯೇ ಸಿಟಿ-11 ಕ್ರಿಕೆಟ್ ಕ್ಲಬ್ ಮೂಲಕ ಆರಂಭಿಸಿದ ವಿದ್ಯಾಧರ ಪಾಟೀಲ್ ಬೆಂಗಳೂರಿನ ಕರ್ನಾಟಕ ಇನ್ಸ್‌ಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.

Leave a Comment