ಅಂಡಮಾನ್‌ಗೆ ಪಬುಕ್ ಚಂಡಮಾರುತ ಆತಂಕ

ನವದೆಹಲಿ, ಜ, ೬-ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಿಗೆ ಪಬುಕ್ ಚಂಡಮಾರುಗ ಅಪ್ಪಳಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಚ್ಚರ ವಹಿಸುವಂತೆ ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.

ಪಬುಕ್ ಚಂಡಮಾರುವ ಪ್ರಸ್ತುತ ಅಂಡಮಾನ್ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಬೀಸುತ್ತಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಹವಾಮಾನ ಕುರಿತ ಮಾಹಿತಿಯನ್ನು ಉಲ್ಲೇಖಿಸಿ  ಗೃಹ ಸಚಿವಾಲಯ ಮುನ್ಸೂಚನೆ ನೀಡಿದೆ.

ಕಳೆದ ೬ ತಾಸುಗಳ ಅವಧಿಯಲ್ಲಿ ಪಬೂಕ್  ೨೦ ಕಿ.ಮೀ ವೇಗದಲ್ಲಿ ವಾಯುವ್ಯ ದಿಕ್ಕಿನತ್ತ ಬೀಸುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ವಾಹನ ಮತ್ತು ವಿಮಾನ ಸಂಚಾರಕ್ಕೆ ಅಡ್ಡಿಯಾಗಲಿದ್ದು, ಆಸ್ತಿಪಾಸ್ತಿ ಹಾನಿಯಾಗುವ ಭೀತಿ ಇದೆ ಎಂದು ಸುಳಿವು ನೀಡಿದೆ.

ಇಂದು ರಾತ್ರಿಯ ವೇಳೆಗೆ ೬೫ ರಿಂದ ೭೫ ಕಿಮೀ ವೇಗದಲ್ಲಿ ಅಂಡಮಾನ್ ದ್ವೀಪದಿಂದ ಹಾದು ಹೋಗಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Leave a Comment