ಅಂಚೆ ಸೇವೆ ಸ್ಥಗಿತಗೊಳಿಸಿದ ಪಾಕ್ ವಿರುದ್ಧ ಭಾರತ ಕಿಡಿ

ನವದೆಹಲಿ.ಅ.21. ಉಭಯ ರಾಷ್ಟ್ರಗಳ ನಡುವೆ ಅಂಚೆ ಮೇಲ್ ಸೇವೆಯನ್ನು ಏಕಪಕ್ಷೀಯವಾಗಿ ನಿಲ್ಲಿಸಿರುವ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಸೋಮವಾರದಂದು ವಾಗ್ದಾಳಿ ನಡೆಸಿದೆ,
ಪಾಕಿಸ್ತಾನದ ಈ ಕ್ರಮವು ಅಂತರರಾಷ್ಟ್ರೀಯ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಭಾರತ ಹೇಳಿದೆ.ಈಗ ಈ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ‘ಭಾರತಕ್ಕೆ ಯಾವುದೇ ನೋಟಿಸ್ ನೀಡದೆ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ ‘ಎಂದು ಟೀಕಿಸಿದ್ದಾರೆ.
‘ಪಾಕಿಸ್ತಾನದ ನಿರ್ಧಾರವು ಅಂತರರಾಷ್ಟ್ರೀಯ ಅಂಚೆ ಒಕ್ಕೂಟದ ಮಾನದಂಡಗಳಿಗೆ ವಿರುದ್ಧವಾಗಿದೆ. ಆ ಮೂಲಕ ಪಾಕಿಸ್ತಾನ ಪಾಕಿಸ್ತಾನ ಎನ್ನುವುದನ್ನು ಸಾಬೀತುಪಡಿಸಿದೆ ” ಎಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ ಪ್ರಸಾದ್ ಹೇಳಿದ್ದಾರೆ.
ಪಾಕಿಸ್ತಾನವು ಯಾವುದೇ ಮುನ್ಸೂಚನೆ ಅಥವಾ ಮಾಹಿತಿಯಿಲ್ಲದೆ ಭಾರತಕ್ಕೆ ಅಂಚೆ ಇಲಾಖೆಯ ಪತ್ರಗಳನ್ನು ಕಳುಹಿಸುವುದನ್ನು ನಿಲ್ಲಿಸಿದೆ ಎಂದು ಸಚಿವರು ಹೇಳಿದರು.

Leave a Comment