ಅಂಚೆ ಚೀಟಿ ಪತ್ರ ವ್ಯವಹಾರ ಹವ್ಯಾಸಗಳ ರಾಜ

ತುಮಕೂರು, ಫೆ. ೨೩- ಅಂಚೆ ಚೀಟಿಗಳನ್ನು ಪತ್ರ ವ್ಯವಹಾರ ಹವ್ಯಾಸಗಳ ರಾಜ ಇದ್ದಂತೆ. ಅಂಚೆ ಚೀಟಿಗಳನ್ನು ಕೂಡಿ ಹಾಕುವುದೂ ಸಹ ಹವ್ಯಾಸ. ಇದು ತಾಂತ್ರಿಕವಾಗಿ ಒಬ್ಬರ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಬೆಂಗಳೂರು ಕರ್ನಾಟಕ ವೃತ್ತದ ಸಹಾಯಕ ಪೋಸ್ಟ್ ಮಾಸ್ಟರ್ ಟಿ.ಆರ್. ಶಂಕರ್ ಹೇಳಿದರು.

ಅಂಚೆ ಚೀಟಿಗಳ ಪ್ರದರ್ಶನ ಮೇಳವು ಉತ್ತಮವಾಗಿ ಆಯೋಜಿಸಲ್ಪಟ್ಟಿದೆ.  ಪ್ರದರ್ಶನಗಳು ಉತ್ತಮ ಗುಣಮಟ್ಟದ್ದಾಗಿದ್ದು, ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿ ರಾಜ್ಯಮಟ್ಟದ ಅಂಚೆಚೀಟಿಗಳ ಪ್ರದರ್ಶನವನ್ನು ನಡೆಸಲು ಪ್ರಸ್ತಾಪಿಸಲಾಗಿದೆ ಎಂದರು.

ಇಲ್ಲಿನ ವಿನಾಯಕನಗರದ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯಲ್ಲಿ ಅಂಚೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ ಮೇಳದಲ್ಲಿ ವಿಶೇಷ ಅಂಚೆ ಚೀಟಿ ಲಕೋಟೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಒಂದು ಸಣ್ಣ ಚೀಟಿಯಿಂದ ಜ್ಞಾನ ವೃದ್ಧಿಯಾಗುತ್ತದೆ. ಚೀಟಿ ಸಂಗ್ರಹದಿಂದ ಧನ, ಜ್ಞಾನ ಮತ್ತು ಸ್ನೇಹ ವೃದ್ಧಿಯಾಗುತ್ತದೆ. ವಸುದೈವ ಕುಟುಂಬಕಂ ಎಂಬ ಸಂದೇಶ ಸಾರುತ್ತದೆ. ಪ್ರತಿಯೊಂದು ಅಂಚೆ ಚೀಟಿ ಹಿಂದೆ ಒಂದೊಂದು ಇತಿಹಾಸವಿದೆ ಎಂದರು.

ಎಪಿಎಂಜಿ ತಾರಾ ಮಾತನಾಡಿ, ಹಿಂದಿನ ಅಂಚೆ ಚೀಟಿಗಳನ್ನು ಸಂಗ್ರಹಿಸುವುದು ರಾಜರ ಹವ್ಯಾಸವಾಗಿತ್ತು. ಆದರೆ ಈಗ ಅದು ಸಾಮಾನ್ಯ ಜನರ ಹವ್ಯಾಸವಾಗಿದೆ ಎಂದು ಹೇಳಿದರು.

ವಿಶೇಷ ಲಕೋಟೆಗಳು ಅಥವಾ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ ದಿನದಲ್ಲಿ ಕೇವಲ ಒಂದು ಬಾರಿ ಮಾತ್ರ ಅಂಚೆ ಚೀಟಿಗಳ ವಿಶೇಷ ರದ್ದತಿ ಮಾಡಲಾಗುತ್ತದೆ. ಆದ್ದರಿಂದ ಅವು ಗಮನಾರ್ಹ ಮೌಲ್ಯವನ್ನು ಹೊಂದಿವೆ. ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಅಂಚೆಚೀಟಿಗಳ ಪ್ರದರ್ಶನ KARNAPEX-2019 ಅನ್ನು ತುಮಕೂರಿನವರು ತಪ್ಪಿಸಿಕೊಂಡಿದ್ದಾರೆ. ತುಮಕೂರು ಅಂಚೆ ವಿಭಾಗವನ್ನು ವಿಭಾಗ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನವನ್ನು ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಿಎಸ್ಐ ವೆಸ್ಲಿ ಚರ್ಚ್‌ನ ದೇವಾನಂದ್ ವಿಶೇಷ ಕವರ್ ಮತ್ತು ಸಿಎಸ್‌ಐ ವೆಸ್ಲಿ ಚರ್ಚ್‌ನ ಚಿತ್ರಾತ್ಮಕ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಿದರು.

ವಿಶೇಷ ಕವರ್‌ಗಳಲ್ಲಿ “ಲೈವ್ ಮತ್ತು ಲೆಟ್ ಲೈವ್” ಶಾಸನಗಳೊಂದಿಗೆ ಮಹಾತ್ಮ ಗಾಂಧಿಯವರ ಚಿತ್ರವನ್ನು ಹೊಂದಿರುವ ಫ್ರಾಂಕಿಂಗ್ ಡಿಜಿಟಲ್ ಮೀಟರ್ ರದ್ದತಿಯನ್ನು ಮಾಡಲಾಗಿದೆ. ಮಂದರಗಿರಿ ಚಿತ್ರವನ್ನು ಹೊಂದಿರುವ ಮತ್ತೊಂದು ವಿಶೇಷ ರದ್ದತಿಯನ್ನು ಪೋಸ್ಟ್ ಕಾರ್ಡ್‌ನಲ್ಲಿ ಮಾಡಲಾಗಿದೆ.

Leave a Comment