ಅಂಘಟಿತವಲಯಗಳನ್ನು ಕಡೆಗಣಿಸಲಾಗುತ್ತಿದೆ: ವನಜಾ

ಮಾಗಡಿ ಜ.೯.  ಅಸಂಘಟಿತ ವಲಯಗಳಲ್ಲಿ ದುಡಿಯುವ ಮಹಿಳೆಯರಿಗೆ ಕಡಿಮೆ ಸಂಬಳ, ಹೆಚ್ಚು ದುಡಿಮೆ, ದೌರ್ಜನ್ಯ,ಕಿರುಕುಳ, ಚುಡಾಯಿಸುವಿಕೆ, ಲೈಂಗಿಕ ಕಿರುಕುಳದಿಂದ   ದುಡಿಯುವ ಮಹಿಳೆಯಿರು ಬಲಿಪಶುಗಳಾಗುತ್ತಿದ್ದಾರೆ ಎಂದು ಪ್ರತಿಭಟನೆ ನಡೆಸಲಾಯಿತು.

ಮಾಗಡಿ ಪಟ್ಟಣ ನಾರಸಿಂಹ ವೃತ್ತದಿಂದ (ಕಲಾಗೇಟ್) ತಾಲೂಕು ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವರೆಗೆ ಸಂಘಟನೆಗಳು ರ್‍ಯಾಲಿಯ ಮೂಲಕ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.

ಇದೇ ವೇಳೆ ಮಾತನಾಡಿದ ಡಿ.ಎಚ್.ಎಸ್. ತಾಲೂಕು ಮುಖ್ಯಸ್ಥೆ ವನಜಾ ಅಸಂಘಟಿತ ಕಾರ್ಮಿಕರಿಗೆ ಮುಖ್ಯವಾಗಿ ಬೇಕಾಗಿರುವುದು ದುಡಿಮೆಗೆ ಸಮಾನವಾದ ವೇತನ, ಆರೋಗ್ಯ ಸೇವೆ, ನಿವೃತ್ತ ಜೀವನ ನಡೆಸಲು ಪಿಂಚಣಿ ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ. ಈ ಕನಿಷ್ಟ ಅವಶ್ಯಕತೆಗಳನ್ನು ನೀಡುವ ಪ್ರಯತ್ನ ಸಾಮಾಜಿಕ ಭದ್ರತೆ ಕಾಯಿದೆಯಲ್ಲಿ ನಡೆದಿಲ್ಲ. ನೆಪಮಾತ್ರಕ್ಕೆ ಕಾಯಿದೆ ತಂದರೆ ಸಾಲದು. ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದಾದ ಕಾಯಿದೆಯನ್ನು ಕಡ್ಡಾಯವಾಗಿ ನಿರ್ವಹಿಬೇಕು ಎಂದು ಆಗ್ರಹಿದರು.

ಅಂಗನವಾಡಿ ನೌಕರರ ತಾಲೂಕು ಅಧ್ಯಕ್ಷೆ ನಾಗರತ್ನ ಮತನಾಡಿ ಅಸಂಘಟಿತ ಕಾರ್ಮಿಕರ ಜೀವನ ಮಟ್ಟವನ್ನು ಉತ್ತಮಪಡಿಸಿ ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ದೇಶದ ಅನೇಕ ಕಾರ್ಮಿಕ ಸಂಘಗಳು, ಸ್ವಯಂ-ಸೇವಾ ಸಂಸ್ಥೆಗಳು ಮತ್ತು ಪ್ರಗತಿಪರರು ನಡೆಸಿದ ಹೋರಾಟಗಳ ಪರಿಣಾಮವಾಗಿ ಕೇಂದ್ರ ಸರ್ಕಾರ 2008 ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆ”ಯನ್ನು ಜಾರಿಗೆ ತಂದಿತು. ಮುಂದುವರಿದು ಕರ್ನಾಟಕ ರಾಜ್ಯ ಸರ್ಕಾರ  2009 ರಲ್ಲಿ ಅಸಂಘಟಿತ ಕಾಮಿಕರ ಸಾಮಾಜಿಕ ಭದ್ರತಾ. ನಿಯಮಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳಲ್ಲಿ ಅನೇಕ ನ್ಯೂನತೆಗಳಿವೆ ಎಂದು ತಿಳಿಸಿದರು.

ಪ್ರತಿಭಟನೆಲ್ಲಿ ತಾಲೂಕಿನ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಗ್ರಾಪಂ ನೌಕರರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ  ಪಾಲ್ಗೊಂಡಿದ್ದರು.

Leave a Comment