ಅಂಗವಿಕಲರು ಅಂಗವಿಕಲರಾಗಿಯೇ ಉಳಿಯಬಾರದು- ಡಾ. ಮಾಸ್ತಿಹೊಳ್ಳಿ

ಚನ್ನಮ್ಮನ ಕಿತ್ತೂರ,ಆ9-ಜಿಲ್ಲಾ ಆಳಿತ, ಜಿಲ್ಲಾ ಪಂಚಾಯತ್, ಅಲಿಮ್ಕೋ, ಅಕ್ಸಲಿಯರಿ ಪ್ರೊಡಕ್ಷನ ಸೆಂಟರ ಬೆಂಗಳೂರ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ಜಿಲ್ಲೆ  ಇವರುಗಳ ಸಂಯುಕ್ತಾಶ್ರಯದಲ್ಲಿ ಭಾರತ ಸರ್ಕಾರ  ಪಂಡಿತ್ ದೀನದಯಾಳ ಉಪಾಧ್ಯಾಯ  ಯೋಜನೆಯಡಿಯಲ್ಲಿ  ವಿಕಲಚೇತನ ಫಲಾನುಭವಿಗಳಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಲು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೌಲ್ಯಾಂಕನ  ಶಿಬಿರ ಏರ್ಪಡಸಲಾಗಿತ್ತು. ಈ ಶಿಬಿರದಲ್ಲಿ  ಪಾಲ್ಗೊಂಡಿದ್ದ  ಶಾಸಕ ಮಹಾಂತೇಶ  ದೊಡ್ಡಗೌಡ್ರ ಮಾತನಾಡಿ ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿಕಲಾಂಗಚೇತನರು ಸೇರಿದ್ದರು ಕೇಂದ್ರ ಸರ್ಕಾರ ಸಾಕಷ್ಟು ವಿಕಲಚೇತನರಿಗಾಗಿ ಸಹಾಯ ನೀಡುತ್ತಿದೆ. ಅದರ ಸದುಪಯೋಗವನ್ನು ವಿಕಲಚೇತನರು ಪಡೆದುಕೊಳ್ಳಬೇಕೆಂದರು.  ನಂತರ ಆಸ್ಪತ್ರೆ ಆವರಣದಲ್ಲಿ ಸಸಿ ನೆಟ್ಟು ನೀರುನಿಸಿದರು.

 
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ಶಿವಾನಂದ ಮಾಸ್ತಿಹೊಳ್ಳಿ ಮಾತನಾಡಿ ಅಂಗವಿಕಲರು ಅಂಗವಿಕಲರಾಗಿಯೇ ಉಳಿಯಬಾರದು ಅವರು ಪ್ರತಿಯೊಂದು ರಂಗದಲಲಿ ಮುಂದಾಗಬೇಕು. ಅಂದಾಗ ಮಾತ್ರ ಮುಂದುವರೆಯಲು ಸಾಧ್ಯ. ಸರ್ಕಾರ ಸಾಕಷ್ಟು ಸಹಾಯ ಹಸ್ತ ನೀಡುತ್ತಿದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು. ಅದರ ಜೊತೆಯಲ್ಲಿ ವಿಕಲಚೇತನರ ತಂದೆ-ತಾಯಂದಿರು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು. ಅವರನ್ನು ಸಮಾಜದಲ್ಲಿ ಮುಂದೆತರಲು ಪ್ರಯತ್ನಿಸಬೇಕೆಂದರು.

 

 
ಬೆಳಗಾವಿ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ನಾಮದೇವ  ಬಿಲ್ಕರ  ಮಾತನಾಡಿ  ನಮ್ಮ ಸಂಸ್ಥೆಯಿಂದ ಸರ್ಕಾರ ನೀಡುತ್ತಿರುವ ಸಹಾಯ ಹಸ್ತವನ್ನು ಜಿಲ್ಲೆಯಲ್ಲಿರುವ ವಿಕಲಚೇತನ ಮಕ್ಕಳಿಗೆ ಯೋಜನೆಗಳನ್ನು ನೀಡಲಾಗುವುದು. ಈ ಯೋಜನೆಯ ಲಾಭವನ್ನು ಆಯಾ ತಾಲೂಕಾ ಆಸ್ಪತ್ರೆಯಲ್ಲಿ ನಾವು ಕ್ಯಾಂಪ್ ಕೈಗೊಂಡು ಕ್ಯಾಂಪ್ ಮೂಲಕ ವಿಕಲಾಂಗ ಚೇತನರಿಗೆ ಸಹಾಯ ಮಾಡುತ್ತೇವೆ ಎಂದರು.

 

 
ಈ  ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷಿಣಿ ಶೈಲಾ ಸಿದ್ರಾಮಣಿ, ಜಿಲ್ಲಾ ಆಸ್ಪತ್ರೆ ಮುಖ್ಯ ಅಧಿಕಾರಿ ಡಾ ಇರಿಕಲ್, ಡಾ ರಾಜೇಂದ್ರ ಡಾಅಗ್ನಿಹೋತ್ರಿ, ಡಾ ನಮಿತಾ, ಡಾ. ಸೋಮಶೇಖರ ಮೂಲಿಮನಿ, ಬಿಜೆಪಿ ಮುಖಂಡರುಗಳು ಬಸನಗೌಡ ಸಿದ್ರಾಮಣಿ,  ಡಾ ಬಸವರಾಜ ಪರವಣ್ಣವರ, ಬಸವರಾಜ ಕೊಳದೂರ,  ಕಿರಣ ಪಾಟೀಲ, ಆಸ್ಪತ್ರೆಯ ಸಿಬ್ಬಂದಿ,  ಬೆಳಗಾವಿ ಪುನರ್ವಸತಿ ಕೇಂದ್ರ ಸಿಬ್ಬಂದಿ, ಮುಂತಾದವರು ಉಪಸ್ಥಿತರಿದ್ದರು

Leave a Comment