ಅಂಗನವಾಡಿ ಆಹಾರ ತನಿಖೆಗೆ ಆಗ್ರಹ

ಕಲಬುರಗಿ ಆ 25: ಜಿಲ್ಲೆಯ ಅಂಗನವಾಡಿಗಳಿಗೆ ಸರಬರಾಜು ಆಗುತ್ತಿರುವ ಆಹಾರ ವಸ್ತುಗಳು ಕಳಪೆ ಗುಣಮಟ್ಟದಾಗಿದ್ದು,ಈ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ  ರೈತಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮಹಿಳಾ ಸ್ವಸಹಾಯ ಪತ್ತಿನ ತರಬೇತಿ ಕೇಂದ್ರದ ಹೆಸರಿನಲ್ಲಿ ಬೇನಾಮಿ ಗುತ್ತಿಗೆದಾರರು ಅಂಗನವಾಡಿಗಳಿಗೆ  ಇಂತಹ ಆಹಾರ ಪೂರೈಕೆ ಮಾಡುತ್ತಿದ್ದು,ಇದರ ಹಿಂದೆ ರಾಜಕೀಯ ಪ್ರಭಾವಿಗಳ ಕೈವಾಡವಿದೆ ಎಂದು ದೂರಿದರು.

ಅಂಗನವಾಡಿಗಳನ್ನು ಪ್ಲೇಸ್ಕೂಲ್ ಮಾಡಲು ಸರಕಾರ ಹೊರಟಿದ್ದು ಶ್ಲಾಘನೀಯ.ಆದರೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಗರ್ಭಿಣಿಯರಿಗೆ ಬಾಣಂತಿಯರಿಗೆ ಇಂತಹ ಆಹಾರ ನೀಡುತ್ತಿರುವದು ಸರಿಯೇ ? ಸಿಡಿಪಿಐಗಳು, ಸ್ಟೋರ್‍ಕೀಪರ್‍ಗಳು ಮತ್ತು ಸರಬರಾಜು ಮಾಡುವವರು  ಈ ಅಪರಾಧಕ್ಕೆ ಹೊಣೆ

ಆಹಾರದ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳಿಸಬೇಕು. ಕಳಪೆ ಆಹಾರ ಸರಬರಾಜು  ಮಾಡುವ ಸಂಸ್ಥೆಗಳಿಗೆ ಬೀಗಮುದ್ರೆ ಹಾಕಬೇಕು ಎಂದು ಆಗ್ರಹಿಸಿದರು..

Leave a Comment