ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ: ಪ್ಲಾಸ್ಟಿಕ್ ವಶ

ತುಮಕೂರು, ಆ. ೨೩- ನಗರದ ಮಂಡಿಪೇಟೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆಯ ಪರಿಸರ ಮತ್ತು ಆರೋಗ್ಯ ಶಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ಪಟೇಲ್ ಏಜೆನ್ಸಿಯಿಂದ 4 ಕ್ವಿಂಟಾಲ್ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು, 5 ಸಾವಿರ ರೂ. ದಂಡ ವಿಧಿಸಿದ್ದಾರೆ. ರಾಹುಲ್ ಮಾರ್ಕೆಂಟಿಗ್ ಅಂಗಡಿಯಿಂದ 10 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು 500 ರೂ. ದಂಡ ವಿಧಿಸಿದ್ದಾರೆ.

ಪರಿಸರ ಎಂಜಿನಿಯರ್ ಮೋಹನ್‌ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚಿಕ್ಕಸ್ವಾಮಿ, ಮನೋಹರ್, ರುದ್ರೇಶ್ ಮತ್ತಿತರರು ಪಾಲ್ಗೊಂಡಿದ್ದರು.

Leave a Comment