ಅಂಗಡಿಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ :ಮಾಲಕನ ವಿರುದ್ಧ ಕಾನೂನುಕ್ರಮ;ಎಸಿ

ಪುತ್ತೂರು ,ಜು.೬- ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿದ್ಯಾಸಂಸ್ಥೆಗಳ ಸಮೀಪದಲ್ಲಿರುವ ಅಂಗಡಿಗಳಲ್ಲಿ ಮೊಬೈಲ್ ಗಳನ್ನು ಇಟ್ಟರೆ ಅಂಗಡಿ ಮಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಪವಿಭಾಗದ ದಂಡಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಆದೇಶಿಸಿದ್ದಾರೆ.

ಪುತ್ತೂರು ಉಪವಿಭಾಗದ ವಿದ್ಯಾಸಂಸ್ಥೆಗಳ ಸಂಚಾಲಕರು ಹಾಗೂ ಮುಖ್ಯಗುರುಗಳಿಗಾಗಿ ನಾರಾಯಣಗುರು ಸಭಾಭವನದಲ್ಲಿ ಶುಕ್ರವಾರ ನಡೆದ ಮಕ್ಕಳಲ್ಲಿ ಶಿಸ್ತು, ಕಾನೂನುಪಾಲನೆಯ ಅರಿವು ನೀಡುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಾಲೆ ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಮಾಡುವ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದು ಅಗತ್ಯ. ಮಕ್ಕಳ ಮೊಬೈಲ್ ಇಡಲು ಶಾಲಾ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡಬೇಕು. ಇನ್ನು ಮುಂದೆ ವಿದ್ಯಾಸಂಸ್ಥೆಗಳ ಪಕ್ಕದ ಅಂಗಡಿಗಳಲ್ಲಿ ಅನಧಿಕೃತ ಮೊಬೈಲ್ ಕಂಡುಬಂದರೆ ಅವುಗಳನ್ನು ವಶ ಪಡಿಸಿಕೊಳ್ಳಬೇಕು. ಈ ಅಂಗಡಿ ಮಾಲಕನ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಅವರು ಸೂಚಿಸಿದರು.

ವಿದ್ಯಾಸಂಸ್ಥೆಗಳ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಲಿದ್ದು, ಅಂಗಡಿ ಮಾಲಕರು ಈ ಬಗ್ಗೆ ಎಚ್ಚರ ವಹಿಸುವಂತೆ ಅವರು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವ, ಆಮೂಲಕ ಜನತೆಯ ಶಾಂತಿಭಂಗ ಉಂಟು ಮಾಡುವ ಕೃತ್ಯಗಳ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ಅವರು ಅಂತಹ ಘಟನೆಗಳ ಬಗ್ಗೆ ತಕ್ಷಣ ಪಕ್ಕಾ ಮಾಹಿತಿ ನೀಡಿ. ಈ ಮಾಹಿತಿ ನೀಡಿದವರ ಹೆಸರನ್ನು ಗುಪ್ತವಾಗಿ ಇಡಲಾಗುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಹಿಂಜರಿಕೆ ಬೇಡ ಎಂದು ಅವರು ತಿಳಿಸಿದರು.

ಡಿವೈಎಸ್‌ಪಿ ದಿನಕರ್ ಶೆಟ್ಟಿ ಮಾತನಾಡಿ, ಅಪರಾಧಿಗೆ ಶಿಕ್ಷೆ ಕೊಡುವುದು ಮುಖ್ಯವಲ್ಲ. ಅಪರಾಧ ತಡೆಗಟ್ಟುವುದು ಅತೀ ಮುಖ್ಯ. ಶಿಕ್ಷಕರು ಮನೋವಿಜ್ಞಾನಿಗಳು. ಅವರಿಗೆ ಮಕ್ಕಳಲ್ಲಿ ಅಪರಾಧ ಮನೋಭಾವ ಕಂಡು ಬಂದ ತಕ್ಷಣ ಅವರನ್ನು ತಿದ್ದುವ ಕೆಲಸ ಮಾಡಬೇಕು ಎಂದರು.

ಸಾಮಾಜಿಕ ಜಾಲತಾಣಗಳು ಇಂದು ಕೆಟ್ಟ ಚಟುವಟಿಕೆಗಳಿಗೆ ಮೀಸಲಾಗುತ್ತಿದೆ. ಮೊಬೈಲ್ ಇದ್ದವರು ತಮ್ಮ ಖಾಸಗಿ ಬದುಕನ್ನೇ ಕಳೆದುಕೊಂಡಿದ್ದಾರೆ. ಅದರಲ್ಲೂ ದೈಹಿಕ ಶಿಕ್ಷಣದ ಶಿಕ್ಷಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ವಿಚಾರಗಳನ್ನು ಪಸರಿಸುವ ಕೆಲಸ ಮಾಡುತ್ತಿದ್ದಾನೆ ಎಂದರೆ ನಮ್ಮ ಅಧ:ಪತನವನ್ನು ಬಿಂಬಿಸುತ್ತಿದೆ ಎಂದರು. ಸುಳ್ಯ ತಾಲೂಕಿನ ಎಲಿಮಲೆ ಶಾಲಾ ಮುಖ್ಯಗುರು ಚಂದ್ರಶೇಖರ್ ಪೇರಾಲ್, ಫಿಲೋಮಿನಾ ವಿರುದ್ಧ ಕಾನೂನು ಕ್ರಮ:ಎಸಿ  ಪಿಯು ಕಾಲೇಜಿನ ಹರ್ಷ ಮತ್ತಿತರರು ತಮ್ಮ ಸಮಸ್ಯೆ ತಿಳಿಸಿದರು.

ವೇದಿಕೆಯಲ್ಲಿ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಸುಳ್ಯ ತಹಶೀಲ್ದಾರ್ ಕುಂಞ ಅಹಮ್ಮದ್, ನಗರ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಸುಳ್ಯ ಪ್ರೊಬೆಷನರಿ ಎಸ್.ಐ ಶಿವಾನಂದ ಎಚ್ ಹಾಜರಿದ್ದರು. ಪುತ್ತೂರು ತಹಶೀಲ್ದಾರ್ ಅನಂತಶಂಕರ ಸ್ವಾಗತಿಸಿದರು.

ಪರಿಶೀಲನೆಗೆ ಅಧಿಕಾರಿ ನೇಮಕ

ಶಾಲಾ ಕಾಲೇಜು, ಹಾಸ್ಟೆಲ್‌ಗಳ ಭಾಗದಲ್ಲಿ ಮಾದಕವಸ್ತುಗಳ ಮಾರಾಟ ನಡೆಯು ತ್ತಿರುವುದು,  ಮಕ್ಕಳ ಮಾದಕ ಚಟಗಳಿಗೆ ಬಲಿಯಾಗುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳ ಪರಿಶೀಲನೆಗೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಈ ಅಧಿಕಾರಿ ನಿಮ್ಮ ವಿದ್ಯಾಸಂಸ್ಥೆಗಳಿಗೆ ಔಪಚಾರಿಕ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಸಮಸ್ಯೆಗಳಿದ್ದರೆ ಅಧಿಕಾರಿ ಗಮನಕ್ಕೆ ತನ್ನಿ ಎಂದು ಸೂಚಿಸಿದ ಅವರು ಮಕ್ಕಳ ದೌರ್ಬಲ್ಯ ಮತ್ತು ಶಕ್ತಿಯನ್ನು ಶಿಕ್ಷಕರಷ್ಟು ಚೆನ್ನಾಗಿ ಅರಿಯಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ಮಕ್ಕಳಿಗೆ ಅರಿವಿನ ಜತೆಗೆ ಎಚ್ಚರಿಕೆ ಕೊಡುವ ಕೆಲಸವನ್ನೂ ಶಿಕ್ಷಕರು ಮಾಡಬೇಕು ಎಂದರು.

ಪಿಯು ಕಾಲೇಜಿನ ಹರ್ಷ ಮತ್ತಿತರರು ತಮ್ಮ ಸಮಸ್ಯೆ ತಿಳಿಸಿದರು.

Leave a Comment